ವ್ಯಾಪಾರಸ್ಥರಿಗೆ ವ್ಯಾಕ್ಸಿನೇಷನ್

ಜಗಳೂರು.ಜೂ.೧೧; ಸರ್ಕಾರದ ಆದೇಶದನ್ವಯ ಮುಂಚೂಣಿ ಕಾರ್ಯಕರ್ತರಾದ ಜಗಳೂರು ಪಟ್ಟಣದ ಬೀದಿಬದಿ ವ್ಯಾಪಾರಸ್ಥರಿಗೆ ಕೋವಿಡ್-19 2ನೇ ಅಲೆಯ ರೋಗ ನಿಯಂತ್ರಣದ ಸಲುವಾಗಿ 18 ರಿಂದ 44 ವಯೋಮಾನದ ವ್ಯಾಪಾರಸ್ಥರಿಗೆ ವ್ಯಾಕ್ಸಿನೇಷನ್ ಲಸಿಕೆಯನ್ನು ಸಾರ್ವಜನಿಕ ಆಸ್ಪತ್ರೆ ಜಗಳೂರು ಇಲ್ಲಿ ಬೀದಿ ಬದಿ ವ್ಯಾಪಾರಸ್ಥಿಗೆ ಲಸಿಕೆ ಹಾಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕಾರ್, ಸಮುದಾಯ ಸಂಘಟಕರು, ಎ.ಕೆ. ಕರಿಯಪ್ಪ, ಕಂದಾಯ ನಿರೀಕ್ಷರರು ಜೆ.ಕೆ. ಸಂತೋಷ್‌ಕುಮಾರ್ ಹಾಗೂ ಆರೋಗ್ಯ ನಿರೀಕ್ಷಕರು ಕಿಫಾಯತ್ ಅಹಮ್ಮದ್ ಇದ್ದರು.