ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವಂತೆ ಮುಖ್ಯಧಿಕಾರಿ  ಖಡಕ್ ಎಚ್ಚರಿಕೆ


(ಸಂಜೆವಾಣಿ ವಾರ್ತೆ)
ಕೊಟ್ಟೂರು:ಜು,19- ಪ.ಪಂ ಮುಖ್ಯಧಿಕಾರಿ ಎ ನಸರುಲ್ಲಾ ಹಾಗೂ  ಸಿಬ್ಬಂದಿ ಸೇರಿ ಪಟ್ಟಣದ ಅಂಗಡಿ, ಹೋಟೆಲ್, ಬೇಕರಿ, ಫುಟ್ಪಾತ್‌ ವ್ಯಾಪಾರಿಗಳು, ತರಕಾರಿ, ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡು ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ  ಕೆಲವು ಕಿರಾಣಿ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ದಿನ ಕೆಲವರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಪ್ಲಾಸ್ಟಿಕ್‌ ಕವರ್‌ ಸರಬರಾಜು ಮಾಡುತ್ತಿರುವ ಮಾಹಿತಿ ಪಡೆದು ಪ.ಪಂ ಅಧಿಕಾರಿ ಹಾಗೂ ಸಿಬ್ಬಂದಿಗಳು   ಮುಖ್ಯ ರಸ್ತೆ ಹಾಗೂ ಮಾರುಕಟ್ಟೆ  ಹೋಟೆಲ್ನಲ್ಲಿ ಪರಿಶೀಲನೆ ನಡೆಸಿದರು. ತಪಾಸಣೆ ಮಾಡಿದಾಗ ವಿವಿಧ ಕಂಪನಿಗಳ ಪ್ಲಾಸ್ಟಿಕ್‌ ಕವರ್‌ಗಳು ಅಲ್ಪ ಪ್ರಮಾಣದಲ್ಲಿ ಪತ್ತೆಯಾದವು.
ಪ್ಲಾಸ್ಟಿಕ್‌ ಕವರ್‌ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಲಾಯಿತು. ಮತ್ತೊಮ್ಮೆ ಸಿಕ್ಕಿ ಬಿದ್ದಲ್ಲಿ ಮೊಕದ್ದಮೆ ದಾಖಲು ಮಾಡಿ ಹೋಟೆಲ್ ಪರವಾನಗಿ ರದ್ದು ಪಡಿಸುವುದಾಗಿ  ಮುಖ್ಯಧಿಕಾರಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.
ಸುಮಾರು 5000 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಯಿತು.
ಅಂದಾಜು 5000. ಮೌಲ್ಯದ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡು ಸುಮಾರು 4000 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಎಲ್ಲಿಯಾದರೂ ಪ್ಲಾಸ್ಟಿಕ್‌ ಕವರ್‌ ಪತ್ತೆಯಾದಲ್ಲಿ ಅಂತಹ ಅಂಗಡಿ, ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಶಾಶ್ವತವಾಗಿ ಹೋಟೆಲ್ಗಳನ್ನು ಮುಚ್ಚಿಸಲಾಗುವುದು ಎಂದು  ತಿಳಿಸಿದ್ದಾರೆ.

Attachments area