ವ್ಯಾಪಾರಸ್ತರು ಸ್ವಚ್ಚತೆಕಾಪಾಡಿ ; ಆರೋಗ್ಯಕರವಾದ ತರಕಾರಿನೀಡಿರಿ

ಕುರುಗೋಡು ಮೇ 03 . ಕೋರೋನಾ 2 ನೇ ಅಲೆ ಅಬ್ಬರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಹರಕ್ಷಕದಳ ಕುರುಗೋಡು ಘಟಕದ ಅಧಿಕಾರಿ ಮತ್ತು ಸಿಬ್ಬಂದಿತಂಡದವರಿಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ತರಿಗೆ ಕೊರೋನಾ ನಿಯಂತ್ರಣದ ಕುರಿತು ಜಾಗ್ರುತಿ ಮೂಡಿಸಿದರು.
ಕುರುಗೋಡು ಗ್ರಹರಕ್ಷಕದಳದ ಘಟಕಾಧಿಕಾರಿ ಬುಗುಡೆನಾಗರಾಜ ಮಾತನಾಡಿ, ಕೋರೋನಾ ನಿಯಂತ್ರಣಕ್ಕೆ ಎಲ್ಲಾ ವ್ಯಾಪಾರಸ್ಥರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಬೇಕು, ಮಾಸ್ಕ್‍ಧರಿಸಿ, ಸಮಾಜಿಕ ಅಂತರಕಾಯ್ದುಕೊಂಡು, ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಬಂದ ಗ್ರಾಹಕರಿಗೆ ಸ್ವಚ್ಚ ಹಾಗು ಗುಣಮಟ್ಟದ ತರಕಾರಿಗಳನ್ನು ನೀಡಲು ಮುಂದಾಗಬೇಕೆಂದು ವ್ಯಾಪಾರಸ್ತರಿಗೆ ಸಲಹೆ ನೀಡಿದರು. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು. ನಂತರ ಎಲ್ಲಾ ವ್ಯಾಪಾರಸ್ಥರಿಗೆ ಗ್ರಹರಕ್ಷಕದಳದ ಘಟಕಾಧಿಕಾರಿ ಹಾಗು ಸಿಬ್ಬಂದಿತಂಡ ಮಾರುಕಟ್ಟೆಯಲ್ಲಿ ಸಂಚರಿಸಿ, ಕೋರೋನಾ ನಿಯಂತ್ರಣದ ಕುರಿತು ಜಾಗ್ರುತಿ ಮೂಡಿಸಿದರು. ಈ ಸಂದರ್ಭದಲ್ಲಿ ಕುರುಗೋಡು ಗ್ರಹರಕ್ಷಕದಳದ ಸಿಬ್ಬಂದಿವರ್ಗ, ತರಕಾರಿ ವ್ಯಾಪಾರಸ್ಥರು ಇದ್ದರು.