ವ್ಯಾಪಾರಸ್ತರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು

ಹನೂರು: ಮಾ.23: ಬೀದಿಬದಿ ವ್ಯಾಪಾರಸ್ಥರು ಹಾಗೂ ದ್ವಿಚಕ್ರವಾಹನ ಸವಾರರು ಗುರುತಿಸಿದ ಸೂಕ್ತ ಸ್ಥಳಕ್ಕೆ ಸ್ಥಳಾಂತರವಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸಬೇಕು ಎಂದು ಇನ್ಸ್ಪೆಕ್ಟರ್ ಆರ್. ಸಂತೋಷ್ ಕಶ್ಯಪ್ ತಿಳಿಸಿದರು.
ಹನೂರು ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ನಾಗರೀಕರ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಬಸ್ ನಿಲ್ದಾಣದ ಒಳಗಡೆ ತಳ್ಳುವ ಗಾಡಿಗಳು ಸೇರಿದಂತೆ ದ್ವಿಚಕ್ರವಾಹನಗಳು ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಡಿಯಾಗುವುದರ ಜತೆಗೆ ಹಿರಿಯ ನಾಗರೀಕರಿಗೆ ಕಿರಿಕಿರಿ ಅಡಚಣೆ ಉಂಟಾಗುತ್ತದೆ ಎಂಬ ದೂರು ಕೇಳಿಬಂದಿತ್ತು ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣದ ಹೈ ಮಾಸ್ ಲೈಟ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಹತ್ತಿರ ಸೂಕ್ತ ಸ್ಥಳ ಗುರುತಿಸಲಾಗಿದೆ. ಪೆÇಲೀಸ್ ಇಲಾಖೆ ವತಿಯಿಂದ ಬ್ಯಾರಿಕೇಡ್ ಹಾಕಲಾಗುವುದು. ಎಲ್ಲೆಂದರಲ್ಲಿ ಅಡ್ಡಲಾಗಿ ತಳ್ಳುವಗಾಡಿಯನ್ನು ನಿಲ್ಲಿಸದೆ ಗುರುತಿಸಿರುವ ಸೂಕ್ತ ಸ್ಥಳದಲ್ಲಿ ಸಾಲಾಗಿ ನಿಲ್ಲಿಸಿಕೊಂಡು ವ್ಯಾಪಾರ ಮಾಡಬೇಕು ಎಂದರು.
ಬೆಂಗಳೂರು , ಮೈಸೂರು, ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟ, ಬಂಡಳ್ಳಿ, ಶಾಗ್ಯ ಮಾರ್ಗವಾಗಿ ಚಲಿಸುವ ಸರ್ಕಾರಿ ಹಾಗೂ ಖಾಸಗಿ ವಾಹನಗಳು ಬಸ್ ನಿಲ್ದಾಣದ ಒಳಗೆ ಹೋಗಬೇಕು. ಮಲೆ ಮಹದೇಶ್ವರಬೆಟ್ಟ, ಬಂಡಳ್ಳಿ-ಶಾಗ್ಯ ಹಾಗೂ ರಾಮಾಪುರ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನಗಳು ಬಸ್ ನಿಲ್ದಾಣದ ಒಳಗೆ ಹೋಗದೆ ಮ.ಬೆಟ್ಟ ಮುಖ್ಯರಸ್ತೆ ಬದಿಯಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹತ್ತಿಸಿಕೊಂಡು ಹೋಗಬೇಕು.ಬಸ್ ಏಜೆಂಟ್ ಸಮವಸ್ತ್ರ ಧರಿಸಿಸಬೇಕು ಎಂದರಲ್ಲದೆ ದ್ವಿಚಕ್ರ ವಾಹನಗಳ ನಿಲುಗಡೆಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೂಕ್ತ ಸ್ಥಳ ಗುರುತಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.