ವ್ಯಾಪಾರದಲ್ಲಿ ನಷ್ಟ-ಮನನೊಂದು ಆತ್ಮಹತ್ಯೆ ’


ಕೋಟ,  ಪರೋಟ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸಾಲದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಘಟನೆ ಸಾಲಿಗ್ರಾಮದ ಕಾರ್ಕಡ ಸಮೀಪ ಭಟ್ರಕಟ್ಟೆಯಲ್ಲಿ ನಡೆದಿದೆ.
ಕಾರ್ಕಡ ಭಟ್ರಕಟ್ಟೆ ನಿವಾಸಿ ೪೩ ವರ್ಷದ ಸುಧಾಕರ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಪರೋಟ ವ್ಯಾಪಾರ ಮಾಡಿಕೊಂಡಿದ್ದರು. ಪರೋಟ ವ್ಯಾಪಾರಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ್ದರು. ಆದರೆ, ಇತ್ತೀಚೆಗೆ ೩ ವರ್ಷಗಳಿಂದ ವ್ಯಾಪಾರ ಸರಿಯಾಗಿ ಆಗದೇ ಸಾಲದ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ಜೀವನದಲ್ಲಿ ಮನನೊಂದು ನಿನ್ನೆ ಸಂಜೆ ಪರೋಟ ಮಾಡುವ ಶಡ್ ನಲ್ಲಿರುವ ಕಿಟಕಿಯ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.