ವ್ಯಾಪಾರಕ್ಕೆ ಸಮಯ ನಿಗದಿ ಮಧ್ಯಾಹ್ನದಿಂದಲ್ಲೇ ಅಂಗಡಿ ಬಂದ್

ಅರಕೇರಾ.ಏ.೨೪-ಜಿಲ್ಲಾ ಆಡಳಿತ ಹಾಗೂ ತಾಲೂಕಾ ಆಡಳಿತ ವತಿಯಿಂದ ಜಿಲ್ಲೇಯಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಯಲ್ಲೆ ಸರಕಾರದ ಮಾರ್ಗ ಸೂಚನೆಯಂತೆ ಗ್ರಾಮ ಪಂಚಾಯತಿಯಿಂದ ಕೊರಾನಾ ನಿಯಂತ್ರರಣಕ್ಕೆ ಕೆಲವು ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸುವಂತೆ ಅರಕೇರಾ ಗ್ರಾಮ ಪಂಚಾಯತ ಆಡಳಿತ ಮಂಡಳಿ ಹಾಗೂ ಕಂದಾಯ ಇಲಾಖೆಯ ವತಿಯಿಂದ ಗ್ರಾಮದಲ್ಲಿನ ಕಿರಾಣಿ ಅಂಗಡಿ. ಬಟ್ಟೆ ಅಂಗಡಿ ,ಹೋಟೇಲ್, ಹಣ್ಣಿನ ಅಂಗಡಿ, ಬೇಕರಿ, ಫಾನಶಾಪ್, ಅಂಗಡಿ ಮಾಲಕರು ಸೇರಿದಂತೆ ಇತರರಿಗೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಇಂದಿನಿಂದ ಮೇ ೪ ರವರಗೆ ಮುಂಜಾನೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರಿಗೆ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಎಲ್ಲಾರೂ ಈ ಆದೇಶವನ್ನು ಪಾಲಿಸಬೇಕೆಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಬೂದೇಪ್ಪ ಯಾದವ ಹೇಳಿದರು.
ಗ್ರಾಮದಲ್ಲಿನ ಎಲ್ಲಾ ಪ್ರತಿ ಅಂಗಡಿಗಳಿಗೆ ಹೋಗಿ ಕೋವಿಡ್ ಎರಡನೇ ಅಲೆ ಕುರಿತು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿ ಮುಂಜಾಗೃತ ಕ್ರಮವಾಗಿ ಅಂಗಡಿಯ ಮುಂದೆ ಅಂತರಕಾಯ್ದಕೊಳ್ಳಲು ಅಂಗಡಿ ಮುಂದೆ ಮಾರರ್ಕ ಮಾಡಲು ತಿಳಿಸಿದರು ಕಡ್ಡಾಯವಾಗಿ ಮಾಸ್ಕ್ ಧರಿಸಲು ತಿಳಿಸಲಾಯಿತು.
ಆದೇಶದಂತೆ ಇಂದು ಮಧ್ಯಾಹ್ನ ದಿಂದಲ್ಲೇ ಗ್ರಾಮದಲ್ಲಿನ ಕಿರಾಣಿ ಅಂಗಡಿ, ಬಟ್ಟೆ ಅಂಗಡಿ, ಹೋಟೇಲ್, ಹಣ್ಣಿನ ಅಂಗಡಿ, ಬೇಕರಿ ಫಾನಶಾಪ್ ಅಂಗಡಿ, ಮಾಲಕರು ಬಂದು ಮಾಡಿ ಸಹಕರಿಸಿದರು. ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ ದ್ವನಿವರ್ದಕ ಮೂಲಕ ಕೊರೋನ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಭಗಮ್ಮ ಮುದುಕಪ್ಪ ಮೇಣಸಿನಕಾಯಿ, ಉಪಾಧ್ಯಕ್ಷರಾದ ಸಿದ್ದಪ್ಪ ಪೈಕಾರ, ಸದಸ್ಯ ವಿರೇಶಭೇರಿ, ಶಿವುನಾಯಕ, ನಾಡತಹಶೀಲ್ದಾರ ಮನೋಹರನಾಯಕ, ಕಂದಾಯ ಅಧಿಕಾರಿ ಬೀಮರಾಯನಾಯಕ, ಮೇಟಿ ಗ್ರಾಮಲೆಕ್ಕಾಧಿಕಾರಿಗಳಾದ ಶರಣಬಸವ, ಯಮನಪ್ಪ ಕುಂಬಾರ, ಇಬ್ರಾಹಿಂಸಾಬ, ಇಮ್ರಾನ್, ಬಾಬು ಗ್ರಾ.ಪಂ. ಸಿಬ್ಬಂದಿವರ್ಗದವರು ಹಾಗೂ ದೇವರಾಜ ಪೋಲಿಸ್ ದೇವದುರ್ಗ ಉಪಸ್ಥಿತರಿದ್ದರು.