ವ್ಯಾಜ್ಯವಲ್ಲದ ವಿಷಯ ಅಭ್ಯಾಸಕ್ಕೆ ವಕೀಲರಿಗೆ ಬಾರ್ ಕೌನ್ಸಿಲ್ ಅವಕಾಶ

ನವದೆಹಲಿ, ಮಾ.೧೬-ವಿದೇಶಿ ಕಾನೂನು ಕ್ಷೇತ್ರದಲ್ಲಿ ವ್ಯಾಜ್ಯವಲ್ಲದ ಅಂತರರಾಷ್ಟ್ರೀಯ ವಿಷಯಗಳಲ್ಲಿ ಮಾತ್ರ ಅಭ್ಯಾಸ ಮಾಡಲು ಭಾರತೀಯ ವಕೀಲರಿಗೆ ಭಾರತೀಯ ಬಾರ್ ಕೌನ್ಸಿಲ್ ಅವಕಾಶ ಮಾಡಿಕೊಟ್ಟಿದೆ.

ಸಾಗರೋತ್ತರ ವಕೀಲರ ಅಭ್ಯಾಸ, ವಹಿವಾಟು ಮತ್ತು ಕಾರ್ಪೊರೇಟ್ ಕೆಲಸಗಳಾದ ಜಂಟಿ ಉದ್ಯಮಗಳು, ವಿಲೀನಗಳು ಮತ್ತು ಸ್ವಾಧೀನಗಳು, ಬೌದ್ಧಿಕ ಆಸ್ತಿ ವಿಷಯಗಳು, ಒಪ್ಪಂದಗಳ ಕರಡು ರಚನೆ, ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವುದು, ಮಧ್ಯಸ್ಥಿಕೆ ಪ್ರಕ್ರಿಯೆಗಳು ಇತ್ಯಾದಿಗಳಿಗೆ ಸೀಮಿತವಾಗಿರಲಿದೆ. ಎಂದು ತಿಳಿಸಿದೆ.

ಭಾರತೀಯ ವಕೀಲರು ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಯಾವುದೇ ಇತರ ಶಾಸನಬದ್ಧ ಅಥವಾ ನಿಯಂತ್ರಕ ಸಂಸ್ಥೆಗಳ ಮುಂದೆ ಹಾಜರಾಗಲು ವಾದಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಡಪಡಿಸಿದೆ.

ವಿದೇಶಿ ವಕೀಲರನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವ ಯಾವುದೇ ಪ್ರಸ್ತಾಪವನ್ನು ಸದಾ ವಿರೋಧಿಸುತ್ತಿದ್ದ ಬಾರ್ ಕೌನ್ಸಿಲ್ ಇದೀಗ ಭಾರತೀಯ ವಕೀಲರಿಗೆ ವಿದೇಶದಲ್ಲಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಇದರಿಂದ ವಿದೇಶದಲ್ಲಿ ಭಾರತೀಯ ವಕೀಲರಿಗೆ ಹೆಚ್ಚಿನ ವೃತ್ತಿಪರತೆ ತುಂಬುವ ನಿರೀಕ್ಷೆಯಿದೆ. ಕಾರ್ಯಾಚರಣೆಗಳಿಗೆ ನೀಡಲಾದ ಸೀಮಿತ ವ್ಯಾಪ್ತಿಯೊಳಗೆ ಸಹ, ಸಾಗರೋತ್ತರ ಸಂಸ್ಥೆಗಳಿಗೆ ಸಾಕಷ್ಟು ದೊಡ್ಡ ಮಾರುಕಟ್ಟೆ ಕಲ್ಪಿಸಲಿದೆ ಎಂದು ಭಾವಿಸಲಾಗಿದೆ.

ವಿಶ್ವ ಜಾಗತಿಕ ಗ್ರಾಮವಾಗುತ್ತಿದೆ ಮತ್ತು “ಭಾರತದಲ್ಲಿ ಕಾನೂನು ವೃತ್ತಿಯು ಹಿಂದಿನ ದಿನಗಳಲ್ಲಿ ಕಂಡುಬರದ ಪ್ರಮಾಣದಲ್ಲಿ ಜನರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವುದರಿಂದ ಉಂಟಾಗುವ ಜಾಗತಿಕ ಬದಲಾವಣೆಗಳನ್ನು ಎದುರಿಸಲು ಸಂದರ್ಭಕ್ಕೆ ಅನುಗಣವಾಗಿ ಬದಲಾಗಬೇಕಾಗಿದೆ ಎಂದು ಕೌನ್ಸಿಲ್ ಹೇಳಿದೆ.

ಈ ನಿಯಮಗಳು ದೇಶದಲ್ಲಿ ವಿದೇಶಿ ನೇರ ಹೂಡಿಕೆಯ ಹರಿವಿನ ಬಗ್ಗೆ ವ್ಯಕ್ತಪಡಿಸಿದ ಕಳವಳಗಳನ್ನು ಪರಿಹರಿಸುತ್ತದೆ ಮತ್ತು ಭಾರತವನ್ನು ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಯ ಕೇಂದ್ರವನ್ನಾಗಿ ಮಾಡುತ್ತದೆ ಎಂದು ಅದು ಹೇಳಿದೆ. ಭಾರತೀಯ ವಕೀಲರು ತಮ್ಮ ವಿದೇಶಿ ಸಹವರ್ತಿಗಳಿಂದ ಒಡ್ಡುವ ಸವಾಲನ್ನು ಎದುರಿಸಲು ಉತ್ತಮ ತರಬೇತಿ ಮತ್ತು ಸಜ್ಜುಗೊಂಡಿದ್ದಾರೆ ಎಂದು ಕೌನ್ಸಿಲ್ ಹೇಳಿದೆ.

“ಅಂತರರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯ ಉತ್ತಮ ವೇಗದಲ್ಲಿ ಮುನ್ನಡೆಯುತ್ತಿದೆ. ಅಂತರರಾಷ್ಟ್ರೀಯ ಮತ್ತು ದೇಶ-ದೇಶ ವ್ಯವಹಾರದಲ್ಲಿ ಕಾರ್ಯನಿರ್ವಹಿಸುವ ಗ್ರಾಹಕರು,ಸಾರ್ವಜನಿಕರಿಂದ ಭಾರತದಲ್ಲಿ ಮುಕ್ತ, ಸ್ಪಂದಿಸುವ ಮತ್ತು ಗ್ರಹಿಸುವ ಕಾನೂನು ವೃತ್ತಿಪರ ವಿತರಣಾ ಕಾರ್ಯವಿಧಾನದ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ವೇದಿಕೆಯಾಗಿದೆ.

ಅಂತರಾಷ್ಟ್ರೀಯ ಕಾನೂನು ಕಾರ್ಯ ಕ್ಷೇತ್ರದಲ್ಲಿನ ಬೆಳವಣಿಗೆ ಮತ್ತು ಕಾನೂನು ಅಭ್ಯಾಸದ ಜಾಗತೀಕರಣ ಮತ್ತು ಕಾನೂನಿನ ಅಂತರಾಷ್ಟ್ರೀಯೀಕರಣವು ಭಾರತದಲ್ಲಿ ಕಾನೂನು ವೃತ್ತಿ ಮತ್ತು ಅಭ್ಯಾಸಗಳ ಬೆಳವಣಿಗೆಗೆ ಹೆಚ್ಚು ಪ್ರಸ್ತುತವಾಗುತ್ತಿದೆ” ಎಂದು
“ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.