ವ್ಯಾಕ್ಸಿನ್ ಹಾಕಿಸಿಕೊಂಡು ಕೋವಿಡ್-19 ಹರಡದಂತೆ ನೋಡಿಕೊಳ್ಳಲು ಕರೆ

ಮುದ್ದೇಬಿಹಾಳ ;ಮಾ.23: ಇಡಿ ವಿಶ್ವವೇ ಕರೋನ ಮಹಾಮಾರಿಗೆ ತಲ್ಲಣವಾಗಿತ್ತು ನಮ್ಮ ಭಾರತ ವಿಜ್ಞಾನಿಗಳು ಸ್ವದೇಶಿ ವ್ಯಾಕ್ಸಿನ್ ಕಂಡು ಹಿಡಿದಿದ್ದಕ್ಕೆ ಅಭಿನಂದಿಸುತ್ತೇನೆ. ಸಧ್ಯ ಭಾರತೀ ಕೋವಿಲ್ಡ್ ವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತ ವ್ಯಾಕ್ಸಿನ್ ಆಗಿದ್ದು ಎಲ್ಲ ಹಿರಿಯ ನಾಗರಿಕರು ತಪ್ಪದೆ ವ್ಯಾಕ್ಸಿನ್ ಹಾಕಿಸಿಕೂಳ್ಳುವ ಮೂಲಕ ಕೋವಿಡ್ 19 ಕೊರೊನಾ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು
ಅವರು ಸೋಮುವಾರ ಮುದ್ದೇಬಿಹಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೋವಿಲ್ಡ್ ವ್ಯಾಕ್ಸಿನ್ ಹಾಕಿಸಿ ಕೊಂಡು ಜೆಸಿ ಪ್ರಗತಿ ಸಂಸ್ಥೆಯವರು ಕರೋನ ವ್ಯಾಕ್ಸಿನ್ ಪ್ರಮೋ ಬ್ಯಾನರ್ ಪ್ರೇಮ್ ಗೆ ಚಾಲನೆಯನ್ನು ನೀಡಿದ್ದಲ್ಲದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ದೇಶದ ವಿಜ್ಞಾನಿಗಳು ಸಂಪೂರ್ಣ ಸ್ವದೇಶಿಯ ವ್ಯಾಕ್ಸಿನ್ ತಯಾರಿಸಿದ್ದು ನಮ್ಮ ದೇಶಮಾತ್ರವಲ್ಲದೆ ವಿಶ್ವದ 58 ಕ್ಕೂ ಹೆಚ್ಚು ದೇಶಗಳಿಗೆ ಕರೋನ ಲಸಿಕೆಯನ್ನು ವಿತರಣೆ ಮಾಡಿದ್ದು ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ಜನರು ಅಪ್ರಚಾರಕ್ಕೆ ಕಿವಿಗೂಡದೆ ನಿಮ್ಮ ಮನೆಯ ಹಿರಿಯರಿಗೆ ಲಸಿಕೆಯನ್ನು ಹಾಕಿಸಬೇಕು ಮತ್ತು ನಿಮ್ಮ ಅಕ್ಕಪಕ್ಕದ ಮನೆಯವರಿಗೂ ಸಹ ಲಸಿಕೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ , ನಾನು ಲಸಿಕೆಯನ್ನು ಹಾಕಿಸಿ ಕೊಂಡಿದ್ದೇನೆ ನೀವು ಲಸಿಕೆ ಹಾಕಿಸಿಕೂಳ್ಳಿ ಎಂದು ಕರೆ ನೀಡಿದರು.
ಜನರು ಕರೋನ ನಿಯಮಗಳನ್ನು ಪಾಲಿಸಬೇಕು,ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಬೇಕಿದೆ ಎಂದರು
ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಅನಿಲ್ ಕುಮಾರ್ ಶೇಗುಣಸಿ ಮಾತನಾಡಿ ಪೆಬ್ರವರಿ16 ರಿಂದ ಇಲ್ಲಿಯವರೆಗೆ ನಮ್ಮ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಲ್ಡ್ ಲಸಿಕೆಯನ್ನು ಹಾಕಲಾಗಿದೆ,ನಮ್ಮ ದೇಶದ ಕೋವಿಡ್ ಲಸಿಕೆಗೆ ವಿಶ್ವದಾದ್ಯಂತ ತುಂಬಾ ಬೇಡಿಕೆಯಿದೆ ಎಲ್ಲರೂ ಕರೋನ ಲಸಿಕೆಯನ್ನು ಹಾಕಿಸಿಕೂಳ್ಳಬೇಕು ಎಂದರು .
ಈ ಸಂಧರ್ಭದಲ್ಲಿ ಮಾತನಾಡಿದ ಡಾ.ವಿರೇಶ ಪಾಟೀಲ್ ಹಾಗೂ ಜೆಸಿ ಸಂಸ್ಥೆಯ ಅಧ್ಯಕ್ಷ ಸಂಗಮೇಶ ನಾವದಗಿ ಪ್ರಗತಿ ಜೆಸಿ ಸಂಸ್ಥೆಯಿಂದ ಕರೋನ ವ್ಯಾಕ್ಸಿನ್ ಜಾಗೃತಿಗಾಗಿ ,ವ್ಯಾಕ್ಸಿನ್ ಪ್ರಮೋ ಬ್ಯಾನರ್ ಮಾಡಿ ಆಸ್ಪತ್ರೆಗೆ ನೀಡಿದ್ದು ವ್ಯಾಕ್ಸಿನ್ ಪಡೆದವರು ಈ ಪ್ರಮೋ ಪ್ರೇಮ್ ನಲ್ಲಿ ಪೆÇೀಟೋ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಪೇಸಬುಕ್ ಗಳಿಗೆ ಹಾಕಬಹುದು ಇದರಿಂದ ಸಾರ್ವಜನಿಕ ವಲಯದಲ್ಲಿ ಪ್ರಚಾರವಾಗುತ್ತದೆ ,ನಮ್ಮ ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ದೇಶದ ಜನರಿಗೆ ಮಾತ್ರವಲ್ಲದೆ ಇತರ ಬಡರಾಷ್ಟ್ರಗಳಿಗೆ ಸಹ ಉಚಿತವಾಗಿ ವ್ಯಾಕ್ಸಿನ್ ಪೂರೈಕೆ ಮಾಡಿದ್ದಾರೆ ಎಂದರು
ಈ ಸಂದರ್ಭದಲ್ಲಿ ವ್ಯಾಕ್ಸಿನ್ ಪ್ರಮೋ ಪ್ರೇಮ್ ಬ್ಯಾನರ್ ಉಚಿತವಾಗಿ ಮಾಡಿ ನೀಡಿದ ಬಸವ ಪ್ಲೇಕ್ಸ ನ ಬಸವರಾಜ ಬಿರಾದಾರ ಹಾಗೂ ಪ್ರಶಾಂತ ಹಿರೇಮಠ ಅವರನ್ನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಡಾ.ಪವನ ಸಜ್ಜನ ಶ್ರೋಷಾಧಿಕಾರಿ ಶಿವಾನಂದ ಮಾಗಿ,ಮೇಲ್ವಿಚಾರಕ ಎಂ ಎಸ್ ಗೌಡರ,ಜೆಸಿ ಪ್ರಗತಿ ಸಂಸ್ಥೆಯ ಪಾರಸ ಪೂರವಾಲ್ ,ರಾಜು ಕರಡ್ಡಿ,ಮಾರುತಿ ನಲವಡೆ,ಮುರಳಿಕೃಷ್ಣ ಬೂಡ್ಡೂಡಗಿ,ಅರವಿಂದ ಲದ್ದಿಮಠ,ಪ್ರಭುರಾಜ ಕಲಬುರಗಿ, ಮುಂತಾದವರು ಉಪಸ್ಥಿತರಿದ್ದು ಕರೋನ ವ್ಯಾಕ್ಸಿನ್ ಹಾಕಿಸಿಕೂಂಡರು
ಆಸ್ಪತ್ರೆಯಲ್ಲಿ 60 ವರ್ಷ ಮೆಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹಾಕಲಾಯಿತು