ವ್ಯಾಕ್ಸಿನ್ ಹಾಕಿಕೊಂಡವರ ಮಾಹಿತಿ ನೀಡಲು ವಿ ಲಕ್ಷ್ಮೀರೆಡ್ಡಿ ಒತ್ತಾಯ


ರಾಯಚೂರು, ಜೂ.೧- ಜಿಲ್ಲೆಗೆ ಕೋವಿಡ್ ಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ೪೫ ವರ್ಷದ ಮೇಲ್ಪಟ್ಟವರಿಗೆ ಎಷ್ಟು ವ್ಯಾಕ್ಸಿನ್ ಬಂದಿದೆ ಹಾಗೂ ಎಷ್ಟು ವ್ಯಾಕ್ಸಿನ್ ಹಾಕಿಕೊಂಡಿದ್ದಾರೆ ಎಂದು ತಿಳಿಸಬೇಕೆಂದು ಮಾಜಿ ನಗರ ಸಭಾ ಸದಸ್ಯ ಹಾಗೂ ರಾಯಚೂರುಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿ ಲಕ್ಷ್ಮೀರೆಡ್ಡಿ ಲೋಕಸಭಾ ಸದಸ್ಯ ಹಾಗೂ ಶಾಸಕರಿಗೆ ಮನವಿ ಮಾಡಿದರು.
೧೮ ರಿಂದ ೪೪ ವರ್ಷದ ಯುವಕರಿಗೆ ವ್ಯಾಕ್ಸಿನ್ ಸಿಗದೆ ತೊಂದರೆ ಆಗುತ್ತಿದೆ ಆದ್ದರಿಂದ ೧೮ರಿಂದ ೪೪ ವರ್ಷದವರಿಗೆ ಯಾವ ರೀತಿ ಕೋವಿಡ್ ಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ಹಾಕುವುದನ್ನು ದಿನನಿತ್ಯ ವಾಗಿ ಪೇಪರ್ ಮೂಲಕ ಪ್ರಕಟಣೆ ಮಾಡಬೇಕು ಏಕೆಂದರೆ ಕೆಲವು ಸ್ಥಳದಲ್ಲಿ ಕೇವಲ ಹಮಾಲರಿಗೆ ಹಾಗೂ ಆಟೋ ಚಾಲಕರಿಗೆ ಮಾತ್ರ ವ್ಯಾಕ್ಸಿನ್ ಹಾಕುತ್ತಿದ್ದಾರೆ.
ಯಾಕೆ ಹೀಗೆ ಎಂದು ಕೇಳಿದರೆ ಡಿ ಹೆಚ್ ಓ ಕಚೇರಿಯಿಂದ ಬಂದಂತಹ ವೈದ್ಯರು ಅವರು ಹೇಳಿದಂತೆ ಮಾಡುತ್ತೇವೆ ಎಂದು ಹೇಳುತ್ತಾರೆ ಇದು ತುಂಬಾ ಗೊಂದಲಕ್ಕೆ ಕಾರಣ ವಾಗುತ್ತಿದೆ ಆದ್ದರಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ೨೦ರಿಂದ ೨೫ ಸಾವಿರ ಯುವಕರು ಇರುವುದರಿಂದ ಕನಿಷ್ಠ ೧೫೦೦೦೦ ವ್ಯಾಕ್ಸಿನ್ ಬೇಕಾಗುತ್ತದೆ.
ಆದಕಾರಣ ಎಲ್ಲಾ ಸಂಘ-ಸಂಸ್ಥೆಗಳಿಗೆ ಅಂದರೆ ಚೇಂಬರ್ ಆಫ್ ಕಾಮರ್ಸ್, ಗಂಜ್ ಮರ್ಚಂಟ್ ಅಸೋಶಿಯೇಶನ್,
ಫ್ಯಾಕ್ಟರಿ ಓನರ್ಸ್ ಅಸೋಸಿಯೇಷನ್,ರೈಸ್ ಮಿಲ್ಲರ್ಸ್ ಅಸೋಸಿಯೇಷನ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನಿತರ ಅಸೋಸಿಯೇಷನ್ ಗಳಿಗೆ ಒಂದು ಸಭೆಯನ್ನು ಕರೆದು ಯುವಕರಿಗೆ ವ್ಯಾಕ್ಸಿನ್ ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು, ಒಂದುವೇಳೆ ನೀವು ಹೀಗೆ ಮಾಡದಿದ್ದರೆ ಎಲ್ಲಿ ವ್ಯಾಕ್ಸಿನ್ ಹಾಕುತ್ತಾರೆ ಅಲ್ಲಿ ಗೊಂದಲವಾದರೆ ಅದಕ್ಕೆ ನೀವೆ ಜವಾಬ್ದಾರರು ಎಂದು ಪ್ರಕಟಣೆಯಲ್ಲಿ ತಿಸಿದ್ದರೆ.