ವ್ಯಾಕ್ಸಿನ್ ಪಡೆದು ಆರೋಗ್ಯವಂತ ಸಮಾಜ ನಿರ್ಮಿಸಲು ಕರೆ

ಕಲಬುರಗಿ:ಎ.29:ಸರ್ವರು ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದರೊಂದಿಗೆ ಮುಂಜಾಗ್ರತೆ ವಹಿಸಿ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಬಡಾವಣೆಯ ಹಿರಿಯರಾದ ನಾಗೇಂದ್ರಪ್ಪ ದಂಡೋತಿಕರ್ ಹೇಳಿದರು.
ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಕೆಎಚ್ ಬಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದ ವತಿಯಿಂದ ಕರೋನ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಏಕೆಂದರೆ ಈಗ ನಾವೆಲ್ಲರೂ ಬಹಳ ಗಂಭೀರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಕರೋನದ ಅಲೆಯು ಅತಿ ತೀವ್ರತೆ ಹೊಂದಿದ್ದು ಅದರಿಂದ ತಪ್ಪಿಸಿಕೊಳ್ಳಲು ಅದನ್ನು ನಿರ್ಲಕ್ಷ್ಯ ಮಾಡದೆ ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳುವುದರೊಂದಿಗೆ,ಆಗಾಗ ಸ್ಯಾನಿಟೈಸರ್ ಬಳಸಿ, ದೈಹಿಕ ಅಂತರ ಕಾಪಾಡಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷರಾದ ಸಂಜೀವಕೂಮಾರ ಶೆಟ್ಟಿ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಶ್ರೀನಿವಾಸ ಬುಜ್ಜಿ, ಬಸವರಾಜ ಹೆಳವರ ಯಾಳಗಿ,ಬಾಲಕೃಷ್ಣ ಕುಲಕರ್ಣಿ, ಡಿ ವಿ ಕುಲಕರ್ಣಿ, ನಾಗರಾಜ ವಡ್ಡಣಕೇರಿ, ಪುಂಡಲೀಕ ಜಮಾದರ, ವಿನೋದ ಪಡನೂರ, ವೀರೇಶ ಬೋಳಶೆಟ್ಟಿ, ನ್ಯಾಯವಾದಿ ಜ್ಯೋತಿ ಲಕ್ಷ್ಮೀ ಶೆಟ್ಟಿ,ರಾಮದಾಸ ಪಾಟೀಲ, ರವೀಂದ್ರ ಗುತ್ತೆದಾರ, ದಿಲೀಪ ಬಕ್ರೆ, ಬಸವರಾಜ ಹೊದಲೂರ, ಮಲ್ಲಿಕಾರ್ಜುನ್ ಮಲ್ಲೆದ,ಪ್ರದೀಪ್ ಕುಂಬಾರ, ಕೆ.ಎಮ. ಲೋಕಯ್ಯ ಪ್ರಕಾಶ ಕುಲಕರ್ಣಿ, ಕವಿ ಅರಸನ,ಶಿವಾನಂದ ಬುಜರೆ,ಡಾ॥ ಚೇತನ ಕುಲಕರ್ಣಿ, ಡಾ॥ ಪ್ರಭುಲಿಂಗ ಮಾನಕರ್, ಕಿರಿಯ ಆರೋಗ್ಯ ಸಹಾಯಕಿಯರಾದ ಸುಧಾರಾಣಿ ಪಂಚಾಳ, ಮೀರಾಬಾಯಿ ಬೆಳಮಗಿ, ಆಶಾ ಕಾರ್ಯಕರ್ತೆಯಾದ ಲಕ್ಷ್ಮಿ ಮುಗಳಿ ಹಾಗೂ ಬಡಾವಣೆಯ ಹಲವಾರು ಜನ ಭಾಗವಹಿಸಿ ಸುಮಾರು 150 ಜನರಿಗೆ ವ್ಯಾಕ್ಸಿನ್ ಹಾಕಲಾಯಿತು.