ವ್ಯಾಕ್ಸಿನ್ ನಾಟ್ ಅವೇಲಬಲ್

ಬಳ್ಳಾರಿ ಏ 24 : ಒಂದು‌ ಕಡೆ ಕರೋನಾ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೆ. ಮತ್ತೊಂದಡೆ ಅದನ್ನು‌ ಬರದಂತೆ ತಡೆಯಲೆಂದು‌ ಜನರಿಗೆ ನೀಡುತ್ತಿರುವ ವ್ಯಾಕ್ಸಿನ್ ನಗರದಲ್ಲಿ ಲಭ್ಯ ಇಲ್ಲದಂತಾಗಿದೆ.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇರುವ ವ್ಯಾಕ್ಸಿನೇಷನ್‌ ಕೇಂದ್ರದಲ್ಲಿ ಇಂದು ಬೆಳಿಗ್ಗೆಯಿಂದ ವ್ಯಾಕ್ಸಿನ್ ನಾಟ್ ಅವೇಲಬಲ್ ಎಂಬ ಫಲಕ ಹಾಕಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ವ್ಯಾಕ್ಸಿನ್ ಖಾಲಿ ಆಗಿದೆ. ಇಂದು ಬರಬಹುದು. ಬಂದರೆ ನಾಳೆ ಬೆಳಿಗ್ಗೆಯಿಂದ ಮತ್ತೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.