ವ್ಯಾಕ್ಸಿನೇಷನ್ ಹಂಚಿಕೆಯಲ್ಲಿ ತಾರತಮ್ಯ

ದಾವಣಗೆರೆ.ಜೂ.೧೧; ಸರ್ಕಾರ ಸಾರ್ವಜನಿಕರನ್ನು ಕೋವಿಡ್ ನಿಂದ ಪಾರುಮಾಡಲು ಉಚಿತ ವ್ಯಾಕ್ಸಿನೇಷನ್ ನೀಡುತ್ತಿದೆ, ಆದರೆ ಇದರ ಹಂಚಿಕೆಯಲ್ಲಿಯು ತಾರತಮ್ಯ ನಡೆಯುತ್ತಿದ್ದು, ಪಾಲಿಕೆಯ 21 ನೇ ವಾರ್ಡ್ ಬಸಾಪುರ ಮತ್ತು ಆನೆಕೊಂಡ ವ್ಯಾಪ್ತಿಯಲ್ಲಿ 6 ಬೂತ್ ಗಳು ಇದ್ದು 6500 ಮತದಾರರಿದ್ದಾರೆ, ಇಲ್ಲಿಯವರೆಗೂ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಒಂದೇ ಒಂದು ಬಾರಿಯೂ ಲಸಿಕೆಯನ್ನು ನೀಡದೆ ಇರುವುದು ತಾರತಮ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಹರೀಶ್ ಬಸಾಪುರ ಬೇಸರ ವ್ಯಕ್ತಪಡಿಸಿದ್ದಾರೆ.ಇದರ ಬಗ್ಗೆ ದೂರು ನೀಡಲು ಅಧಿಕಾರಿಗಳಾದ ಶ್ರೀಮತಿ ಮೀನಾಕ್ಷಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ದೂರವಾಣಿಯನ್ನು ಸ್ವೀಕರಿಸುವುದಿಲ್ಲ, ಕಷ್ಟಗಳನ್ನು ಆಲಿಸಲು ಎಂದು ಅವರನ್ನು ನೇಮಿಸಿದರು ಅವರೇ ಸ್ಪಂದಿಸದಿದ್ದರೆ ದೂರು ನೀಡುವುದಾದರೂ ಎಲ್ಲಿ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತಕ್ಕೆ ಕೇಳಿದರೆ ನಿಮ್ಮದು ಪಾಲಿಕೆ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ.ಪಾಲಿಕೆಯವರನ್ನು ಕೇಳಿದರೆ ವ್ಯಾಕ್ಸಿನೇಷನ್ ಹಂಚುವುದು ಮೀನಾಕ್ಷಿ ಮೇಡಂ ಎನ್ನುತ್ತಾರೆ.ಆದರೆ ಅವರುದೂರವಾಣಿ ಕರೆಯನ್ನು ಸ್ವೀಕರಿಸುವುದಿಲ್ಲ.
ವ್ಯಾಕ್ಸಿನೇಷನ್ ಮಾರಾಟವಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಜಿಲ್ಲಾಧಿಕಾರಿಗಳು  ಯಾವ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ಇಲ್ಲಿಯವರೆಗೂ ಎಷ್ಟೆಷ್ಟು ವ್ಯಾಕ್ಸಿನೇಷನ್ ನೀಡಲಾಗಿದೆ ಮತ್ತು ಕೇಂದ್ರಗಳಲಿ ಆ ವ್ಯಾಪ್ತಿಯ ನಾಗರಿಕರಿಗೆ ಎಷ್ಟು ವ್ಯಾಕ್ಸಿನ್ ನೀಡಲಾಗಿದೆ ಹಾಗೂ ಹೊರಗಿನ ನಾಗರಿಕರಿಗೆ ಎಷ್ಟು ವ್ಯಾಕ್ಸಿನ್ ನೀಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿದರೆ ಹಗರಣದ ಮಾಹಿತಿ ದೊರೆಯುತ್ತದೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ, ಸೂಕ್ತ ರೀತಿಯ ಕ್ರಮ ತೆಗೆದುಕೊಂಡು ಜನತೆಗೆ ವ್ಯಾಕ್ಸಿನೇಷನ್ ದೊರಕಿಸಿ ಕೊಡಬೇಕೆಂದು ಅವರು ಮನವಿ ಮಾಡಿದರು.