ವ್ಯಸನ ಮುಕ್ತ ಸಮಾಜದಲ್ಲಿ ಯುವಕರ ಪಾತ್ರ ಮಹತ್ತರ-ಡಾ. ಪ್ರಸಾದ

ಧಾರವಾಡ ಡಿ.19-ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಕೊಡುಗೆ ಅತಿ ಅವಶ್ಯ. ಆದರೆ ಇಂದಿನ ಯುವಕರು ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ವ್ಯಸನಾಸಕ್ತರಾಗಿ ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿರುವಾಗ ಶಾಂತಿ ವಿದ್ಯಾದಾನ ಸಂವರ್ಧನ ಸಮಿತಿ ಸಾಂಗಲಿಯ ಜೈನ ಯುವಕರು ಕೊಲ್ಹಾಪುರದಿಂದ ಕನ್ಯಾಕುಮಾರಿಯರೆಗೆ ಅಹಿಂಸೆ, ಸಸ್ಯಾಹಾರದ ಮಹತ್ವ, ಪರಿಸರ ರಕ್ಷಣೆ, ರಾಷ್ಟ್ರಿಯ ಭಾವೈಕ್ಯತೆಯ ಧ್ಯೇಯವನ್ನಿಟ್ಟುಕೊಂಡು ಸೈಕಲ್ ಜಾಥಾ ನಡೆಸುತ್ತಿರುವುದು ಸಮಾಜಕ್ಕೆ, ದೇಶಕ್ಕೆ ಒಂದು ಆಶಾಕಿರಣವಾಗಿ ಗೊಚರಿಸುತ್ತಿದೆ ಎಂದು ಧಾರವಾಡ ನಗರಕ್ಕೆ ಆಗಮಿಸಿದ ಶಾಂತಿ ಸದ್ಭಾವನಾ ಸೈಕಲ್ ಜಾಥಾವನ್ನು ಕಲಾಭವನ ಮೈದಾನದಲ್ಲಿ ಜೈನ ಸಮಾಜದ ಪರವಾಗಿ ಸ್ವಾಗತಿಸಿ ಡಾ. ಅಜಿತ ಪ್ರಸಾದ ಮಾತನಾಡಿದರು. ಈ ರೀತಿ ಯುವಕರಲ್ಲಿ ಅಹಿಂಸೆ, ಸಸ್ಯಾಹಾರಗಳ ಬಗ್ಗೆ ಜಾಗೃತಿ ಮೂಡಿದಲ್ಲಿ ದೇಶದಲ್ಲಿ ಮೌನ ಕ್ರಾಂತಿ ಆಗುವದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಸೈಕಲ್ ಜಾಥಾದಲ್ಲಿ ಯುವಕರು ಜೈನ ಆಚಾರ ವಿಚಾರಗಳನ್ನು ಪಾಲಿಸುತ್ತಾ ತಮ್ಮ ಆಹಾರ ತಾವೇ ತಯಾರಿಸಿ ಊಟ ಮಾಡುತ್ತಿದ್ದಾರೆ. ಹಾಗೂ ಯುವಕರಿಗೆ ವ್ಯಸನಗಳಿಂದ ದೂರವಿರಲು ಪ್ರೇರೆಪಿಸುತ್ತಿದ್ದಾರೆ. ಇಂತಹ ಯುವ ಪಡೆಗೆ ಸಾರ್ವಜನಿಕರು ಸಮಾಜ ಪ್ರೋತ್ಸಾಹಿಸಬೇಕಾಗಿದೆ ಎಂದು ದತ್ತಾ ಡೋರ್ಲೆ ಹೇಳಿದರು.
ಈ ಜಾಥಾದಲ್ಲಿ 80 ಯುವಕರಿದ್ದು, ಅದರಲ್ಲಿ 70 ವರ್ಷದ ಹಿರಿಯರು ಇರುವುದು ಆಶ್ಚರ್ಯ. ಕಳೆದ 6 ವರ್ಷಗಳಿಂದ ದೇಶದ ವಿವಿಧ ಭಾಗಗಳಿಗೆ ಈ ತಂಡ ಸೈಕಲ್ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಈ ಜಾತಾವು ಕೊಲ್ಹಾಪುರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಪಾಶ್ರ್ವನಾಥ ಶೆಟ್ಟಿ, ಮಹಾವೀರ ಉಪಾದ್ಯೆ, ಕೆ.ಜಿ ರಪಾಟಿ, ನಾಗನೂರ, ಶ್ರೀಧರ ಬಸ್ತಿ, ಅರವಿಂದ ರೋಖಡೆ, ಯಲ್ಲಪ್ಪಾ ಜೈನರ್, ಬಿ.ಬಿ ಮುಖರೆ ಉಪಸ್ಥಿತರಿದ್ದರು.