ವ್ಯಸನ ಮುಕ್ತ ದಿನಾಚರಣೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಆ.1: ಶರಣಂಗೆ ಶರಣರೇನ್ಸಿದ ಮಹಾಂತ ಶಿವಯೋಗಿಗಳ ಜನ್ಮದಿನದಂದು  ಘನ ಸರ್ಕಾರ ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಅವರು ಪಟ್ಟಣದ ನೂತನ ತಾಲೂಕು ಕಚೇರಿ ಅವರಣದಲ್ಲಿ ತಾಲೂಕು ಆಡಳಿತ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ  ಶಾಖಾ ಮಠ ಸಿದ್ದಯ್ಯನಕೋಟೆ, ಹಾಗೂ ಚಿತ್ತರಗಿ ಸಂಸ್ಥಾನ ಮಠ ಇಳಕಲ್ ಇವರ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಮಾತನಾಡುತ್ತಾ, ಮಹಾಂತ ಶಿವಯೋಗಿಗಳು ಬಸವಳಿಯದ ಮಹಾ ಪುರುಷ ಶರಣಾಧಿ ಶರಣರು
ಮನುಷ್ಯ ದು_ಚಟಗಳಿಗೆ ಬಲಿಯಾಗಿ ಜೀವನವನ್ನೇ ಕಳೆದುಕೊಳ್ಳುತ್ತಿರುವನು ಎಂಬ ಕಳಕಳಿಯ ಕಾಯ ಕಲ್ಪಪದೊಂದಿಗೆ ನಾಡಿನಾದ್ಯಂತ ಸಂಚಾರಿಸಿ ದು-ಚಟಗಳನ್ನು ತಮ್ಮ ಜೋಳಿಗೆಗೆ  ಬಿಕ್ಷೆ ನೀಡುವಂತೆ ಬೇಡಿ ಜನರನ್ನು ದು-ಚಟಗಳಿಂದ ಮುಕ್ತಗೊಳಿಸಿದ್ದಂತ ಪರಮಪೂಜ್ಯ ಮಹಾ ಪುರುಷ ಇಳಕಲ್ ಮಠದ ಮಹಾಂತ ಶಿವಯೋಗಿಗಳು ಎಂದರು.
ತಹಶೀಲ್ದಾರ್ ಟಿ. ಸುರೇಶ್ ಕುಮಾರ್, ಮಾತನಾಡಿ, ಘನ ಸರ್ಕಾರದ ಆದೇಶದ ಮೇರೆಗೆ ಆಗಷ್ಟ್ 1ತಾರೀಖಿನಂದು ವ್ಯಸನ ಮುಕ್ತ ದಿನಾಚರಣೆಯಾಗಿ ನಾಡಿನಾದ್ಯಂತ  ಆಚರಿಸಲಾಗುವುದು ಆದರಂತೆ ನಾವು ಕೂಡ ಆಚರಣೆ ಮಾಡುತ್ತಿದ್ದೆವೆ. ಮಹಾಂತ ಶಿವಯೋಗಿಗಳು ನಾಡಿನ  ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಟ್ಟ ಚಟಗಳ ನಿರ್ವಹಣೆಗಾಗಿ ಶ್ರಮಿಸಿದ ಶರಣ ಸಂತರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಓ ಜಾನಕೀ ರಾಮ್ ಕೆ. ಓ. ಪ್ರಾ ಗೋವಿಂದಪ್ಪ, ಸಿಡಿಪಿಓ ಶ್ರೀಮತಿ ಸವಿತಾ ಸ ಸ ನೀ ಶ್ರೀಮತಿ ಮಾಲತಿ, ಪಾಪ ನಾಯಕ ಕಾಂ ಮು,ಪ ಸಂ ಇ ನೀ ರಂಗಪ್ಪ, ಡಿ. ಓ. ಮುರಾರ್ಜಿ, ಓ, ಕರಿ ಬಸಪ್ಪ, ಲತೀಫ್, ಕಸಪಾ ಅ ಜಿಂಕೆ ಶ್ರೀನಿವಾಸ್, ಕಾಂತರಾಜು, ಕಾ. ಸಿ ಬಸಣ್ಣ, ಮಹೇಶ್ ಇನ್ನು ಮುಂತಾದವರಿದರು.