ವ್ಯಸನ ಮುಕ್ತ ದಿನಾಚರಣೆ: ವಿದ್ಯಾರ್ಥಿನಿಯರಿಂದ ಪ್ರತಿಜ್ಞಾ ವಿಧಿ

ಕಲಬುರಗಿ,ಆ.01: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಅಡಿಯಲ್ಲಿ ಡಾ. ಮಹಾಂತ್ ಶಿವಯೋಗಿಗಳು ಇಲಕಲ್ ಅವರ ಜನ್ಮದಿನದ ಅಂಗವಾಗಿ “ವ್ಯಸನ ಮುಕ್ತ” ದಿನಾಚರಣೆ ಕಾರ್ಯಕ್ರಮ ಜರುಗಿತು.
ಇದೇ ಸಂಧರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಮುಖ್ಯ ಅತಿಥಿಗಳಾದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗೇಂದ್ರ ಮಸೂತಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು, ಪ್ರಿನ್ಸಿಪಾಲ್ ಡಾ. ರಾಜೇಂದ್ರ ಕೊಂಡಾ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ಮಹೇಶ್ ಗಂವ್ಹಾರ್ ಅವರು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ. ಚಂದ್ರಕಲಾ ಪಾಟೀಲ್, ಐಕ್ಯುಎಸಿ ಸಂಯೋಜಕರಾದ ಡಾ. ಶಿವರಾಜ್ ಗೌನಳ್ಳಿ, ಡಾ.ಪ್ರೇಮಚಂದ್ ಚವ್ಹಾಣ್, ಡಾ. ರೇಣುಕಾ ಹಾಗರಗುಂಡಗಿ, ಶ್ರೀಮತಿ ಉಮಾ ರೇವುರ್, ಡಾ. ಶರಣಮ್ಮ ಕುಪಿ,್ಪ ಶ್ರೀಮತಿ ಸುμÁ್ಮ ಕುಲಕರ್ಣಿ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.