ವ್ಯಸನಮುಕ್ತ. ಸೌಹಾರ್ದಯುತ ಹಾಗೂ ಸಾಂಸ್ಕøತಿಕವಾಗಿ ಗಣೇಶ ಹಬ್ಬ ಆಚರಿಸಿ : ಸಿಪಿಐ ನಾಯ್ಕೋಡಿ

ಅಥಣಿ : ಸೆ.10:ತಾಲೂಕಿನಾದ್ಯಂತ ಗಣೇಶ ಹಬ್ಬವನ್ನು ಸಾರ್ವಜನಿಕರು ಶಾಂತಿಯುತವಾಗಿ, ಅರ್ಥಪೂರ್ಣವಾಗಿ ಆಚರಿಸಬೇಕು, ಅಥಣಿಯಂತಹ ಪಾವನ ಪುಣ್ಯಕ್ಷೇತ್ರದಲ್ಲಿ ಈ ಬಾರಿಯ ಗಣೇಶೋತ್ಸವವನ್ನು ವ್ಯಸನಮುಕ್ತ. ಸೌಹಾರ್ದಯುತ ಹಾಗೂ ಸಾಂಸ್ಕೃತಿಕವಾಗಿ ಆಚರಿಸುವ ಮೂಲಕ ಸಮಾಜದ ಸಾಮರಸ್ಯವನ್ನ ಕಾಪಾಡಬೇಕು. ಎಂದು ಸಿಪಿಐ ರವೀಂದ್ರ ನಾಯ್ಕೋಡಿ ಮನವಿ ಮಾಡಿದರು,
ಅವರು ಪಟ್ಟಣದ ಪೆÇಲೀಸ್ ಸಮುದಾಯ ಭವನದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ಕಳೆದ ವರ್ಷದಂತೆ ಈ ವರ್ಷವೂ ಕೂಡ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಲು ಮುಂದಾಗಬೇಕು, ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ಮಂಡಳದವರು ನೋಡಿಕೊಳ್ಳಬೇಕು, ಗಣೇಶ ಪ್ರತಿಷ್ಠಾಪನೆ ಮಾಡಿವ ಸ್ಥಳದಲ್ಲಿ ಮದ್ಯಪಾನ ನಿಯಮಬಾಹಿರ ಧ್ವನಿ ವರ್ಧಕ (ಡಾಲ್ಬಿ) ಅಳವಡಿಕೆ, ಇಸ್ಪೀಟ್, ಜೂಜಾಟ ಸೇರಿ ಯಾವುದೇ ಅಪರಾಧಿಕ ಪ್ರಕರಣಗಳು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಕಂಡುಬಂದಲ್ಲಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಪೆÇೀಲೀಸ್ ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಒಂದು ವೇಳೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆಹರಿಸಬೇಕು ಅದಕ್ಕೆ ಯಾವುದೇ ರೀತಿಯ ಪ್ರಚೋದನೆ ನೀಡಬಾರದು. ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಎಂದು ಮನವಿ ಮಾಡಿದರು.
ಗಣಪತಿ ಮೂರ್ತಿಯನ್ನು ದಿನದ 24 ಗಂಟೆಗಳು ನೋಡಿಕೊಳ್ಳಲು ಮಂಡಳದವರು ಜವಾಬ್ದಾರಿತಯುತ ಸ್ವಯಂ ಸೇವಕರನ್ನು ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಅವರ ಪಟ್ಟಿಯನ್ನು ಪೆÇಲೀಸ್ ಇಲಾಖೆಗೆ ಸಲ್ಲಿಸಬೇಕು, ಸಿಡಿಮದ್ದು ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಜಾಗರೂಕತೆ ವಹಿಸಬೇಕು ಎಂದರು,
ಈ ವೇಳೆ ಪಿಎ??? ಶಿವಶಂಕರ ಮುಕರಿ ಮಾತನಾಡಿ ಸಾರ್ವಜನಿಕ ಗಣೇಶ ಹಬ್ಬದ ಆಚರಣೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಪರವಾನಿಗೆ ನೀಡಲಾಗುವುದು. ಆದರೆ, ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಶಾಂತಿ ಕದಡದಂತೆ ಗಣೇಶ ಹಬ್ಬ ಆಚರಿಸಬೇಕು, ಗಣೇಶ ಮಂಡಳದವರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಆ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಹಕರಿಸಬೇಕು. ಪೆಂಡಾಲ್ ಹಾಕುವ ಮುಂಚೆ ಸ್ಥಳದ ಮಾಲೀಕರು ಹಾಗೂ, ಪುರಸಭೆ, ಪಪಂ/ ಗ್ರಾಪಂ, ಹೆಸ್ಕಾಂ, ಪೆÇೀಲೀಸ್ ಇಲಾಖೆ, ಹಾಗೂ ಅಗ್ನಿಶಾಮಕ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಅನುಮತಿ ಪಡೆಯದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಇಲ್ಲ. ಆದ್ದರಿಂದ ಆಯೋಜಕರು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಎಂದರು,
ಈ ಸಂದರ್ಭದಲ್ಲಿ ಪಿಎಸ್ ಐಗಳಾದ ರಾಕೇಶ್ ಬಗಲಿ, ಚಂದ್ರಶೇಖರ ಸಾಗನೂರ ಪಟ್ಟಣದ ಗಣ್ಯರಾದ ಶ್ರೀಶೈಲ ಸಂಕ, ವಿನಯ ಪಾಟೀಲ, ಅಜೀತ ಪವಾರ, ಅಶೋಕ ಯಲ್ಲಡಗಿ. ವಿಕಾಸ್ ತಾಂಬಟ, ಕುಮಾರ ಸಣ್ಣಕ್ಕಿ. ಬೀರಪ್ಪ ಯಂಕಂಚ್ಚಿ, ಕಿಶನ್ ಸೌದಾಗರ, ಸೇರಿದಂತೆ ಪಟ್ಟಣದ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಗಣೇಶ ಮಂಡಳದವರು ಉಪಸ್ಥಿತರಿದ್ದರು,

“ಅಹಿತಕರ ಘಟನೆಗಳಿಗೆ ಅವಕಾಶ ಬೇಡ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿದೆ ಅಥಣಿ ಪಟ್ಟಣ”
ಗಣೇಶೋತ್ಸವ ಸಂದರ್ಭದಲ್ಲಿ ಪಟ್ಟಣದಲ್ಲಿ ಎಲ್ಲಿಯೂ ಶಾಂತಿ ಸೌಹಾರ್ದತೆ ಕದಡದಂತೆ ನೋಡಿಕೊಳ್ಳುವುದು. ಪೆuಟಿಜeಜಿiಟಿeಜಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ, ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದ ಎಲ್ಲ ವೃತ್ತಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಮೆರವಣಿಗೆ ಸಮಯದಲ್ಲಿ ಯಾವದೇ ಅಹಿತಕರ ಘಟನೆ ನಡೆಯಬಾರದು, ಒಂದು ವೇಳೆ ನಡೆದರೆ ಅದು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗುತ್ತದೆ ತಕ್ಷಣ ನಮ್ಮ ಗಮನಕ್ಕೆ ಬರುತ್ತದೆ ಆದ ಕಾರಣ ಯಾರು ಕೂಡ ಯಾವದೇ ರೀತಿಯ ಅಪರಾಧ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು, ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಠಾಣೆಯಲ್ಲಿಯೇ ಕುಳಿತು ಪಟ್ಟಣದಲ್ಲಿ ನಡೆಯುವ ದೃಶ್ಯಾವಳಿಗಳ ಮೇಲೆ ನಿಗಾ ಇಡಲಾಗುತ್ತದೆ, ಕಿಡಿಗೇಡಿಗಳು ಯಾವುದೇ ತರಹದ ಕಾನೂನಿಗೆ ಭಂಗ ತರುವ ಚಟುವಟಿಕೆಗಳು ಮಾಡಿದ್ದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,

          ರವೀಂದ್ರ ನಾಯ್ಕೋಡಿ, 
            ಸಿಪಿಐ. ಅಥಣಿ,