ವ್ಯಸನಮುಕ್ತ ದಿನಾಚರಣೆ

ಬೀದರ:ಆ.2: ವ್ಯಸನÀಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಿರಣ ಪಾಟೀಲ ರವರು ಕಾರ್ಯಕ್ರಮವನ್ನುದ್ದೇಶಿಸಿ, ಮಾದಕ ವಸ್ತು ಸೇವನೆ ಮಾಡುವುದು ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಕಂಡು ಬಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬಾರದು ಎಂದು ಹೇಳಿದರು.
ಅದೇ ರೀತಿ ಇನ್ನೋರ್ವ ಮುಖ್ಯ ಅತಿಥಿಯಾದ ಡಾ. ರಾಘವೇಂದ್ರ ವಾಘಮಾರೆ ರವರು ಕಾರ್ಯಕ್ರಮವನ್ನುದ್ದೇಶಿಸಿ, ಮಾನಸಿಕ ಕಾಯಿಲೆಗೆ ಒಳಗಾದ ವಿದ್ಯಾರ್ಥಿ ಅಥವಾ ವ್ಯಕ್ತಿಯವರು ಪ್ರಥಮ ಸ್ಥಾನದಲ್ಲಿ ಇರುವಾಗಲೇ ವೈದ್ಯರ ಸಲಹೆಯನ್ನು ಅಥವಾ ಆಪ್ತ ಸಮಾಲೋಚಕರ ಸಲಹೆಯನ್ನು ಪಡೆದುಕೊಳ್ಳುವುದರ ಬಗ್ಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆದ ಎಸ್.ಬಿ. ಪಾಟೀಲ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಪೂಜ್ಯ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿ ಸ್ವಾಮಿಗಳು ಮಾದಕ ವಸ್ತು ಸೇವನೆ ಮಾಡುವವರನ್ನು ಮನೆಗಳಿಗೆ ಭೇಟಿ ನೀಡಿ, ಹಣವನ್ನು ಕಾಣಿಕೆಯನ್ನು ತೆಗೆದುಕೊಳ್ಳದೇ ಮಾದಕ ವಸ್ತುಗಳು ಸೇವನೆ ಮಾಡದಂತೆ ಪ್ರತಿಜ್ಞಾ ವಿಧಿ ಮಾಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.
ಡಾ. ಅಮಲ ಶರೀಫ್ ರವರು ಕಾರ್ಯಕ್ರಮವನ್ನುದ್ದೇಶಿಸಿ ವಿದ್ಯಾರ್ಥಿಗಳು ಮೊದಲೇ ವ್ಯಸನದಿಂದ ಒಳಗಾಗದಂತೆ ನೋಡಿಕೊಳ್ಳಬೇಕು ಹಾಗೂ ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕೆಂದು ಹೇಳಿದರು,
ವೀರಶೆಟ್ಟಿ ಚನ್ನಶೆಟ್ಟಿ ಹಿರಿಯ ಅಧಿಕಾರಿಗಳು ವ್ಯಸನÀಮುಕ್ತ ಭಾರತ ನಿರ್ಮಾಣ ಮಾಡಲು ವಿದ್ಯಾರ್ಥಿUಳಿಗೆ ಮತ್ತು ಸಿಬ್ಬಂಧಿಗಳಿಗೆ ಪ್ರತಿಜ್ಞಾವಿಧಿ ಮಾಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಿರೂಪಣೆ ಬಸವರಾಜ ಸಿ.ಬಿ. ರವರು ನೆರವೇರಿಸಿಕೊಟ್ಟರು, ಸ್ವಾಗತವನ್ನು ಬಸವರಾಜ ರವರು ನೆರವೇರಿಸಿಕೊಟ್ಟರು, ಕಾರ್ಯಕ್ರಮದ ವಂದನಾರ್ಪಣೆ ಅಭಿಷೇಕ ಕುಮಾರ ನೆರವೇರಿಸಿಕೊಟ್ಟರು, ಪ್ರಾರ್ಥನೆ ಗೀತೆಯನ್ನು ಅಂಜಲಿ ಮತ್ತು ಸಂಗಡಿಗರು ನೆರವೇರಿಸಿಕೊಟ್ಟರು.
ಐಶ್ವರ್ಯ ವಿದ್ಯಾರ್ಥಿಯು ವ್ಯಸನÀಮುಕ್ತ ದಿನಾಚರಣೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ಶ್ರೀಮತಿ ರೇಣುಕಾ ಗೋಪಿಚಂದ ತಾಂದಳೆ ,ಅಂಬಾದಾಸ, ಪರಶುರಾಮ, ಸಂಗಮೇಶ ರಾಠೋಡ, ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಯವರು ಉಪಸ್ಥಿತರಿದ್ದರು.