ವ್ಯಸನಮುಕ್ತ/ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಆಚರಣೆ

ತಾಳಿಕೋಟೆ:ಆ.2: ಲಿಂ.ಶ್ರೀ ಮ.ನಿ.ಪ್ರ ಪೂಜ್ಯ ಮಹಾಂತ ಶಿವಯೋಗಿಗಳು ಇಳಕಲ್, ಪೂಜ್ಯರ ಜನ್ಮದಿನದ ಪ್ರಯುಕ್ತ “ವ್ಯಸನಮುಕ್ತ ದಿನಾಚರಣೆ” ಹಾಗೂ “ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಮಂಗಳವಾರರಂದು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.

    ಅತಿಥಿಗಳಾಗಿ ಆಗಮಿಸಿದ ಜಿ.ಎಸ್. ವಾಲಿ ಅವರು ವ್ಯಸನಮುಕ್ತ ದಿನಾಚರಣೆಯ ಬಗ್ಗೆ ಹಾಗೂ ಶ್ರೀಮತಿ ಸುಮಂಗಲಾ ಮನಗೊಂಡ ಅವರು ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರೋಧಿ ದಿನದ ಕುರಿತು ಮಕ್ಕಳಿಗೆ ತಮ್ಮ ಉಪನ್ಯಾಸಗಳನ್ನು ನೀಡಿದರು.
   ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಎಂ.ಎಸ್. ವಸ್ತ್ರದ, ಶ್ರೀಮತಿ ಬಿ.ಪಿ. ಬಡಿಗೇರ, ಮೌನೇಶ ಕೆಲ್ಲೂರ,  ಕು. ಪೂಜಾ ಸಜ್ಜನ ಹಾಗೂ ಶ್ರೀಮತಿ ಸಿ ಜಿ ಮಠಪತಿ ಉಪಸ್ಥಿತರಿದ್ದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ.ಪೂ.ಕಾಲೇಜ್ ಪ್ರಾಚಾರ್ಯರಾದ ಶ್ರೀಮತಿ ಅಕ್ಕಮಹಾದೇವಿ ಬಾರಕೇರಾ ಅವರು ವಹಿಸಿ ಮಾತನಾಡಿದರು.
    ವೆದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಪ್ರಭುಗೌಡ ಚೌಧರಿ, ವಸಂತಕುಮಾರ ಪಂಡಿತ. ಉಪಸ್ಥಿತರಿದ್ದರು.