ಕೊಪ್ಪಳ-13;- ವ್ಯಸನದಿಂದ ಕುಟುಂಬಗಳೇ ನಾಶವಾಗುತ್ತಿವೆ. ಕುಡಿತದ ಚಟ ವ್ಯಕ್ತಿಯ ಆರೋಗ್ಯ, ನೆಮ್ಮದಿ, ವ್ಯಕ್ತಿತ್ವ ಹಾಳಾಗುವುದರ ಜೊತೆಗೆ ಅವನ ಕುಟುಂಬವೂ ನಾಶವಾಗುತ್ತದೆ ಎಂದು ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಪೂಜಾರರವರು ನುಡಿದರು. ಅವರು ನಗರದ ಹೂವಿನಾಳ ರಸ್ತೆಯಲ್ಲಿರುವ ನವಜ್ಯೋತಿ ಸಮಗ್ರ ವ್ಯಸನಮುಕ್ತಿ ಹಾಗೂ ಪುರ್ನವಸತಿ ಕೇಂದ್ರದಿಂದ ಆಯೋಜಿಸಿದ್ದ ‘ಅಂತರ್‍ರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಕಳ್ಳಸಾಗಾಣಿಕೆ ವಿರೋಧಿ ದಿನ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಮುಂದುವರೆದು ಯುವಕರೂ ಸಹ ಇಂದು ಕುಡಿತವನ್ನು ಫ್ಯಾಷನ್ ಆಗಿ ಮಾಡಿಕೊಂಡು ಅದರ ದಾಸರಾಗುತ್ತಿರುವುದು ವಿಷಾದದ ಸಂಗತಿ, ಕುಡಿಯತದ ಚಟ ಕುಟುಂಬಷ್ಟೇ ಅಲ್ಲ ದೇಶದ ಅಭಿವ್ರದ್ಧಿಗೂ ಸಹ ತೊಡಕಾಗುತ್ತಿದೆ ಎಂದರು. ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‍ರವರು ವ್ಯಸನಗಳನ್ನು ಬಿಟ್ಟು ಬದುಕನ್ನು ಕಟ್ಟಿಕೊಳ್ಳಬೇಕು. ಕುಡಿತ ಇಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿದೆ. ಕುಡಿತದ ವ್ಯಸನ ಇಂದು ದೇಶಕ್ಕೆ ಕಳಂಕ ಎಂಬಂತೆ ಕಾಡುತ್ತಿದೆ, ಅದಕ್ಕಾಗಿ ಕುಡಿತ ಬಿಟ್ಟು ಆರೋಗ್ಯವಂತರಾಗಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣದ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶ್ರೀದೇವಿ ನಿಡುಗುಂದಿಯವರು ನವಜ್ಯೋತಿ ಸೇವಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಮಾಜಮುಖಿಯಾಗಿ ಕೆಲಸ ಮಾಡುವ ಇಂತಹ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುದುದಾಗಿ ನುಡಿದರು.
ನವಜ್ಯೋತಿ ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಈಶ್ವರ ಹಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಾರ್ಥನೆಯನ್ನು ಮಹ್ಮದ ರಫಿಯವರು ಮಾಡಿದರೆ, ಕಿರಣ ಬೇವಿನಮರದರವರು ಸ್ವಾಗತಿಸಿದರೆ, ಕೊನೆಗೆ ಬಸವರಾಜ ಬೇವಿನಮರವರು ವಂದಾನಾರ್ಪಣೆ ಮಾಡಿದರು. ಕೃಷ್ಣ ಬನ್ನಿಗಿಡದರವರು ಕಾರ್ಯಕ್ರಮ ನೆರವೇರಿಸಿದರು. ನವಜ್ಯೋತಿ ಐಆರ್‍ಸಿಎ ಸಕಲ ಸಿಬ್ಬಂದಿ ಹಾಗೂ ಹಾರೈಕೆಯಲ್ಲಿದ್ದ ನವಜ್ಯೋತಿ ಸೇವಾ ಕೇಂದ್ರದ ಸಕಲ ವ್ಯಸನಿಗಳು ಉಪಸ್ಥಿತರಿದ್ದರು.