ವ್ಯವಹಾರದಲ್ಲಿ ವಿಫಲರಾದವರು ಮಾನವ ಹಕ್ಕುಗಳ ರಕ್ಷಕರು:ಟಪಾಲ್ ಗಣೇಶ್

ಬಳ್ಳಾರಿ, ಸೆ.16: ನಗರದಲ್ಲಿ ತಾವು ಮಾಡಿದ ವ್ಯವಹಾರಗಳಲ್ಲಿ ವಿಫಲವಾದವರು ತಾವು ಮಾನವ ಹಕ್ಕುಗಳನ್ನು ರಕ್ಷಿಸುವವರು ಎಂದು ಸಂಘ ಕಟ್ಟಿಕೊಂಡು ಬ್ಲಾಕ್ ಮೇಲ್ ದಂಧೆ ನಡೆಸುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಟಪಾಲ್ ಗಣೇಶ್ ಆರೋಪಿಸಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾನವ ಹಕ್ಕುಗಳ ಸಂಘದವರೆನ್ನುವ ಲೋಕೇಶ್ ಎಂಬುವವರು ಕೆಲ ವಕೀಲರೊಂದಿಗೆ ಶಾಮೀಲಾಗಿ ವಿನಾಕಾರಣ ಜನರಿಗೆ ನೋಟೀಸ್ ನೀಡುತ್ತ, ಭಯ ಬೀಳಿಸುತ್ತಾರೆ. ಮಾತ್ತೆತ್ತಿದರೆ ಡಿಸಿ, ಎಸ್ಪಿ ಎಂದು ಅಮಾಯಕ ಜನರಿಗೆ ಕಿರುಕುಳ ಕೊಡುತ್ತಿದ್ದಾರೆ.
ಬ್ಲಾಕ್ ಮೇಲ್ ಹಣ ವಸೂಲಿ ಮಾಡುತ್ತಾರೆ. ಅದಕ್ಕಾಗಿ ಅವರ ಸಂಘ ಮತ್ತು ಅವರ ಮೇಲೆ ಎಸ್ಪಿ ಅವರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ತಾರೆ.