ವ್ಯವಸ್ಥೆ ಬದಲಾಗಲು ಹೋರಾಟ ಮಾಡಿದ ಕಂಟೆಪ್ಪ ಗುಮ್ಮೆ

ಬೀದರಃಮೇ.27:ಸಮತಾ ಸಂಸ್ಕ್ರತಿ ವೇದಿಕೆ ಕಟ್ಟಿಕೊಂಡು ಬಡವರ, ನಿರ್ಗತಿಕರ ಬಾಳು ಬೆಳಗಿಸಲು ಪ್ರತಿಭಾ ಪುರಸ್ಕಾರ ಆಯೋಜಿಸಿದ ದೂರದೃಷ್ಟಿಗರು, ವ್ಯವಸ್ಥೆ ಬದಲಾಯಿಸಲು ತನೆÀ್ನಲ್ಲ ವೈಯಕ್ತಿಕ ಬದುಕು ಲೆಕ್ಕಿಸದೆ ಸದಾ ಅನ್ಯರ ಹಿತವನ್ನು ಕಾಪಾಡಲು ಬದ್ಧತೆ, ವೈಚಾರಿಕತೆಯಿಂದ ದುಡಿದ ಕಂಟೆಪ್ಪ ಗುಮ್ಮೆ ಬದುಕು ರೋಮಾಂಚಕಾರಿ ಎಂದು ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಎಪ್ಪತ್ತನಾಲ್ಕನೇ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಕಂಟೆಪ್ಪ ಗುಮ್ಮೆ ಅವರ ಅಮಲಾಪೂರ ಕವಿ ನಿಲಯದಲ್ಲ್ಲಿ ದಿನಾಂಕ 26-5-2024 ರಂದು ಉದ್ಘಾಟಿಸಿ ಬರಹಗಾರರು ಪ್ರೀತಿ-ಪ್ರೇಮ, ಮನಿಸರ್ಗ ಇಂತಹವಿ ವಿಷಯಗಳನ್ನು ಹೊರತುಪಡಿಸಿ ಬದುಕು, ಹಸಿವು, ಇಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕೆಂದರು. ಶೋಷಣೆ ಇವತ್ತಿಗೂ ಸಮಾಜದಲ್ಲಿ ಮುಂದುವರೆದಿದೆ. ಸಾಹಿತಿಗಳು ಇಂತಹ ಸೂಕ್ಷ್ಮಗಳ ವಿಷಯಗಳತ್ತ ಗಮನಹರಿಸಬೇಕು. ನೂರಾರು ಪುಸ್ತಕಗಳು ಬರೆದರೂ ಹೋರಾಟ ಚಿಂತನೆಗಳಿಲ್ಲದಿದ್ದರೆ ಸಾಹಿತಿಗಳು ಸಮಾಜದಲ್ಲಿ ಕಳೆದುಹೋಗುತ್ತಾರೆ ಎಂದು ಗಂಧರ್ವ ಸೇನಾ ಅವರು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಕೇಂದ್ರ ವ್ಯಕ್ತಿಗಳಾದ ಕಂಟೆಪ್ಪ ಗುಮ್ಮೆ. ನೈತಿಕ ಮೌಲ್ಯದ ಬಸವಣ್ಣನಿಗೆ ಸಲಾಮು ಎಂಬ ಸ್ವ ರಚಿತ ಕವನದೊಂದಿಗೆ ಮಾತು ಆರಂಭಿಸಿ.. ನನ್ನ ಹೋರಾಟಕ್ಕೆ ಪ್ರೇರಣೆ ಕಾರ್ಲ್ ಮಾಕ್ರ್ಸ ಹಾಗೂ ಲೆನಿನ್ ವಿಚಾರಗಳು. ಸಾಹಿತ್ಯಕ್ಕೆ ಪ್ರೇರಣೆ ನೀಡಿದವರು ಕೆ ಆರ್ ದುರ್ಗಾದಾಸ ಹಾಗೂ ಕಾಶಿನಾಥ ಅಂಬಲಗಿ, ಚನ್ನಣ್ಣ ವಾಲಿಕಾರ, ಸೌದತ್ತಿ ಮಠ, ಮ ಗು ಬಿರಾದಾರ. ಜಿ ಎಸ್ ಶಿವರುದ್ರಪ್ಪ ಅವರ ಹತ್ತಿರ ಹೋಗಿ ಕವನ ತೋರಿಸಿದಾಗ ಕಲ್ಲಿನ ಮೇಲೆ ಕೋಗಿಲೆ ಹಾಡೋದಿಲ್ಲವೇ ಎಂಬ ಮಾತು ನನ್ನ ವಿಚಾರದಲ್ಲಿ ದಿಕ್ಕು ಬದಲಾಯಿಸಲು ಕಾರಣವಾಯಿತು.ಕವಿಯಾದವನು ತನ್ನ ಬೆವರಿನ ಹನಿಯ ಅನುಭವದಿಂದ ಕವನ ಬರೆಯಬೇಕು. ತಾಯಿ ಮಗುವಿಗೆ ಜನ್ಮ ನೀಡುವಾಗ ಪಟ್ಟ ಕಷ್ಟ ದಂತೆ ಕವಿ ತನ್ನ ಬದುಕಿನ ಬವಣೆಯಿಂದ ಸಾಹಿತ್ಯ ಹೊರಹೊಮ್ಮುತ್ತದೆಂದು ತಮ್ಮ ಅನುಭವ ಹಂಚಿಕೊಂಡರು. ನಾನು ವಡೆದ ಬಳೆ ಕಿರು ಕಾದಂಬರಿ, ಬೆಂಕಿ ಕಾರಿತು ಕೆಂಡ ಕವನ ಸಂಕಲನ,ಸತ್ತಾಗ ಹೆಗಲು ಕೊಡು, ಗೊಡ್ಡ ಎಮ್ಮೆ ಹೀಗೆ ಅನೇಕ ಕವನಗಳು ಬರೆದಾಗ ಅವುಗಳನ್ನು ಅಚ್ಚು ಹಾಕಲು ಆರ್ಥಿಕ ಮುಗ್ಗಟ್ಟಿನಿಂದ ಬಳಲಿದೆ. ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಿ ನಮ್ಮೂರಿಗೆ ರಸ್ತೆ , ಶಾಲೆ ಹಾಗೂ ಬೀದಿ ದೀಪ ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ. ನಾನು ತುರ್ತು ಪರಿಸ್ಥಿತಿಯಲ್ಲಿ ಮದುವೆಯಾದೆ, ಆದರೆ ಸ್ಥಳಿಯ ವೈದ್ಯಾಧಿಕಾರಿಗಳಿಗೆ ತೋರಿಸಿದಾಗ ನಿಮಗೆ ಮಕ್ಕಳಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ ಬದುಕೆ ದುಸ್ಥರವಾದಾಗಲೂ ಎದೆ ಗುಂದದೆ ಆತ್ಮವಿಶ್ವಾಸ ದಿಂದ ಮುನ್ನಡೆದು ನನ್ನ ಹೋರಾಟವೊ ಅಥವಾ ವೈಚಾರಿಕ ಮನೊಭಾವವೋ ಗೊತ್ತಿಲ್ಲ ನನಗೆ ಪ್ರಕೃತಿಯ ಆಶೀರ್ವಾದ ದಿಂದ ಮೊದಲನೆ ಮಗಳು ಸೀಮಿಕ್ತಾ, ಎರಡನೇ ಮಗಳು ಸಂಸ್ಕ್ರತಿ, ಹಾಗೂ ಮಗ ಚುನಾವಣಾ ಸಂಧರ್ಭದಲ್ಲಿ ಹುಟ್ಟಿದಾಗ ಟಿ.ಎನ್. ಶೇಷನ್ ಹವಾ ಇದ್ದಾಗ ಅವರ ಹೆಸರನ್ನೆ ಆದರ್ಶವಾಗಿಟ್ಟು ಕೊಂಡು ಶೆಷನ್ ಎಂದು ನಾಮಕರಣ ಮಾಡಿರುವೆ ಇದೆಲ್ಲ ನನ್ನ ಜೀವನದ ಕಥೆ.
ನಾನು ಮೊದಲಿನಿಂದಲೂ ವರದಕ್ಷಿಣೆ ವಿರೋಧಿ ನನ್ನ ಮನೋಭಾವಕ್ಕೆ ತಕ್ಕಂತೆ ನನ್ನೆರಡು ಹೆಣ್ಣು ಮಕ್ಕಳನ್ನು ಹುಂಡಾ ರಹಿತ ಮದುವೆ ಮಾಡಿದ್ದು ಒಂದು ಅಪರೂಪ. ಇರ್ವ ಅಳಿಯಂದಿರು ಇಂಜಿನಿಯರ್ ಆಗಿದ್ದಾರೆ, ಮಗ ಡಿಗ್ರಿ ಓದಿದ್ದು ಮನೆ ಯೊಂದನ್ನು ಕಟ್ಟಿ ನನ್ನ ಜೀವನಕ್ಕೆ ಮೌಲ್ಯ ಒದಗಿಸಿ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದ ಹೆಂಡತಿಯಾದ ಕವಿತಾಳ ಹೆಸರಿನ ಕವಿ ನಿಲಯ ಇಟ್ಟಿರುವೆ.
ನನ್ನ ಜೀವನ ಅತ್ಯಂತ ಕಷ್ಟ ವಾದರೂ ನನಗೆ ಸಹಕಾರ ಮಾಡಿದವರಿಗೆ ನಾನೆಂದು ಮರೆಯಲಾರೆ, ಗಂಧರ್ವ ಸೇನಾ, ಪ್ರಕಾಶ ಮಾಳಗೆ, ಡಿ ಬೀರುಸಿಂಗ್, ಶಂಭುಲಿಂಗ ವಾಲದೊಡ್ಡಿ, ಎಂ. ಎಸ್. ಮನೋಹರ, ಬಿ ನಾರಾಯಣ ರಾವ ಹೀಗೆ ಅನೇಕರು ಮಾರ್ಗದರ್ಶನ ನೀಡಿರುವ ಕಾರಣ ನನ್ನ ಬದುಕು ಸಂತೃಪ್ತಿ ಯಿಂದ ಮುನ್ನಡೆದಿದೆ. ನಾನು ಎಂ.ಎ. ವ್ಯಾಸಂಗ ಮಾಡಿ ಹೋರಾಟ ವೇ ನನ್ನ ಬದುಕು ರೂಪಿಸಿ ಕೊಂಡ ಬಾಳಿನ ಬುತ್ತಿ ಇಲ್ಲಿಯ ತನಕ ಬಂದಿರುವುದು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಿರುವ ಕ್ಷಣ ಜೀವ ಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತನ್ನ ಅನುಭವ ಹಂಚಿ ಕೊಂಡರು.
ವಕೀಲರು, ಚುಟುಕು ಸಾಹಿತಿಗಳಾದ ವೀರಶೆಟ್ಟಿ ಚೌಕನಪಳ್ಳಿ ಹಾಗೂ ಸಾಹಿತಿಗಳಾದ ಪ್ರಭು ಮಾಲೆ ಸಂವಾದ ನಡೆಸಿಕೊಟ್ಟರು. ಮೊದಲಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ್ ಚನ್ನಶಟ್ಟಿ ಆಶಯ ಮಾತನಾಡಿದರು. ಅಮಲಾಪುರ ಗ್ರಾಮದ ಶ್ರೀಮತಿ ಮಮಿತಾ ಪರಪ್ಪನ ಅಗ್ರಹಾರದ ಪೋಲುಇಸ್ ಸಿಬ್ಬಂದಿಯಾಗಿದ್ದು, ರಾಷ್ಟ್ರಮಟ್ಟದ ಅಥ್ಲೆಟಿಕನಲ್ಲಿ ಚಿನ್ನದ ಪದಕ ಪಡೆದಿದ್ದಕ್ಕಾಗಿ ಕಸಾಪದಿಂದ ಗೌರವಿಸಲಾಯಿತು. ಹಾಗೂ ಇದೇ ಸಂದಬ್ದಲ್ಲಿ ಕಂಟೆಪ್ಪ ಗುಮ್ಮೆ ದಂಪತಿಗಳ:ಇಗೆ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ. ಕ.ಸಾ.ಪ.ಅಧ್ಯಕ್ಷರಾದ ಎಂ.ಎಸ್. ಮನೋಹರ ವಹಿಸಿದ್ದರು.
ಜಗನ್ನಾತ ಕಮಲಾಪುರೆ ಕಾರ್ಯಕ್ರಮ ಸಂಚಾಲಿಸಿದರೆ ಮೊದಲಿಗೆ ಶಿವಶಂಕರ ಟಕರೆ ಸ್ವಾಗತಿಸಿದರು. ಕೊನೆಯಲ್ಲಿ ಬಾಬು ಮಡಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಕುಮಾರ ಕಟ್ಟೆ, ದಾನಿ ಬಾಬುರಾವ, ಶಂಭುಲಿಂಗ ವಾಲ್ದೊಡ್ಡಿ, ಡಾ. ಸಂಜೀವಕುಮಾರ ಅತಿವಾಳೆ, ಮಾರುತಿ ಕಂಟೆ ನರಸಿಂಗ ಸಾಮ್ರಾಟ್ ಮಹಾದೇವ ಕಾಂಬಳೆ, ಚಂದ್ರಕಾಂತ ಹೊಸಮನಿ, ರಮೇಶ ಬಾಬು ಅಶೋಕ ಸಂಗಮ, ಶ್ರೀಮತಿ ಸಿಮ್ಲಾಬಾಯಿ ಶಾಸ್ತ್ರಿ, ಕೀರ್ತಿಕುಮಾರ ಮತ್ತಿತರು ಉಪಸ್ಥಿತರಿದ್ದರು.