ವ್ಯವಸ್ಥಿತ ಪೂರ್ವ ಸಿದ್ದತೆಯಿಂದ ಚುನಾವಣೆ ಅಚ್ಚುಕಟ್ಟು ನಿರ್ವಹಣೆ ಸಾಧ್ಯ:ಗೋವಿಂದರೆಡ್ಡಿ

ಬೀದರ, ಏ. 27: ಎಲ್ಲಾ ಹಂತದ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವ್ಯವಸ್ಥಿತ ಪೂರ್ವ ಸಿದ್ದತೆಯನ್ನು ಮಾಡಿಕೊಂಡಲ್ಲಿ ಚುನಾವಣೆಯು ಅಚ್ಚುಕಟ್ಟಾಗಿ ನಡೆಸಲು ಸಾಧ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಬುಧವಾರ ನಗರದ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಚುನಾವಣೆಯ ಪೂರ್ವ ಸಿದ್ದತೆ ಹಾಗೂ ಬಿ.ಯು/ಸಿ.ಯು/ವಿವಿಪ್ಯಾಟ್ಸ್ ಸಿದ್ದಪಡಿಸಿಕೊಳ್ಳುವ ಕುರಿತು ಚುನಾವಣಾ ವಲಯ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಪ್ರತಿ ವಿಧಾನಸಭಾ ಕ್ಷೇತ್ರದ ಬಿ.ಯು/ಸಿ.ಯು/ವಿವಿಪ್ಯಾಟ್ಸ್‍ಗಳನ್ನು ಪ್ರತ್ಯಕವಾಗಿ ಸಿದ್ದಪಡಿಸಿ ಇಟ್ಟುಕೊಳ್ಳಬೇಕು, ಇವುಗಳ ಸಿದ್ದಪಡಿಸುವ ದೃಶ್ಯವನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಗಮನಿಸಲು ಟಿ.ವಿ ಮಾನಿಟರಿಂಗ್ ಅಥವಾ ಸಿಸಿಟಿವಿ ಅಳವಡಿಸಿ. ಇವಿಎಂ ಸಿದ್ದಪಡಿಸಿದ ನಂತರ ಒಂದು ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಶೇ05 ರಷ್ಟು ಇವಿಎಂಗಳಿಂದ 1000 ಅಣಕು ಮತದಾನ ಪ್ರಕ್ರೀಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಸಮ್ಮೂಖದಲ್ಲಿ ಕೈಗೊಳ್ಳಬೇಕು ಈ ಅಣುಕು ಮತದಾನದಲ್ಲಿ ಚುನಾವಣಾ ಅಭ್ಯರ್ಥಿಗಳು ಭಾಗವಹಿಸಲು ಬಯಸಿದ್ದಲ್ಲಿ ಅವರಿ ಅವಕಾಶ ಮಾಡಿಕೊಟ್ಟು ನಂತರ ಅವರಿಂದ ಸಹಿ ಪಡೆಯಬೇಕು ಎಂದರು.

ಈ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿ ಅಭ್ಯರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಹಾಗೂ ಇವಿಎಂ ಸಿದ್ದಪಡಿಸುವ ಸ್ಥಳಕ್ಕೆ ಕೇವಲ ಒಂದೆ ಮಾರ್ಗದಿಂದ ಆಗಮನ ಹಾಗೂ ನಿರ್ಗಮನ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವ ಇವಿಎಂ ಕೆಲಸ ಮಾಡುವುದಿಲ್ಲವೋ ಅದನ್ನು ಪ್ರತೇಕವಾಗಿ ಇರಿಸಬೇಕು ಎಂದು ಮಾಹಿತಿ ನೀಡಿದರು.

ಜೊತೆಗೆ ಚುನಾವಣೆಗೆ ನಿಯೋಜನೆಗೊಂಡ ವಲಯ ಅಧಿಕಾರಿಗಳು ಏಪ್ರಿಲ್ 6 ರಂದು ತಮ್ಮ ಸಂಬಂದಿಸಿದ ವಲಯಗಳ ಮತಗಟ್ಟೆಗೆ ಭೇಟಿ ನೀಡಿ ಪೂರ್ವ ಸಿದ್ದತೆಯನ್ನು ಪರಿಶೀಲಿಸಬೇಕು ಯಾವುದೇ ಲೋಪ ಕಂಡುಬಂದಲ್ಲಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತ್ತು ವಲಯ ಅಧಿಕಾರಿಗಳು ತಮ್ಮ ವಲಯದ ಮತಗಟ್ಟೆಗೆ ನಿಯೋಜಿಸಿದ ಎಲ್ಲಾ ಸಿಬ್ಬಂದಿಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಬೀದರ ಚುನಾವಣಾಧಿಕಾರಿ ಲವೀಶ್ ಓರ್ಡಿಯಾ,ಬೀದರ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ ಸುರೇಖಾ, ಬಸವಕಲ್ಯಾಣ ಚುನಾವಣಾಧಿಕಾರಿ ರಮೇಶ ಕೋಲಾರ, ಭಾಲ್ಕಿ ಚುನಾವಣಾಧಿಕಾರಿ ಪಿ.ಜಿ.ಪವಾರ, ಹುಮನ್ನಾಬಾದ ಚುನಾವಣಾಧಿಕಾರಿ ಮೋತಿಲಾಲ ಲಂಬಾಣಿ, ಔರಾದ ಚುನಾವಣಾಧಿಕಾರಿ ರಿತೇಂದ್ರನಾಥ ಸೂಗುರ,

ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ, ರಾಜ್ಯಮಟ್ಟದ ಚುನಾವಣಾ ತರಬೇತಿದಾರ ಡಾ.ಗೌತಮ ಅರಳಿ, ಜಿಲ್ಲಾ ಇವಿಎಂ ನೂಡಲ್ ಅಧಿಕಾರಿ ಶಂಕರ್,ಚುನಾವಣಾ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.