ವ್ಯವಸ್ಥಿತ ಪಾಲನೆಯಾದ ಕರೋನಾ ನಿಯಮಾವಳಿ ಅಧಿಕಾರಿಗಳ ಶ್ರಮ ಸಾರ್ಥಕ

ಹೊಸಪೇಟೆ ಏ26: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೆ, ದಿನೆ ಹೆಚ್ಚಳವಾಗುತ್ತಿದ್ದರೂ ಎಚ್ಚರಗೊಳ್ಳದ ಸಾರ್ವಜನಿಕರ ಕ್ರಮಕ್ಕೆ ಅಧಿಕಾರಿಗಳು ಕೆಂಡಾಮಂಡಲವಾಗಿದ್ದು ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಿಯಮ ಉಲ್ಲಂಘನೆಯ ವಿರುದ್ದ ಆಕ್ರೋಶವ್ಯಕ್ತಪಡಿಸಿದ ಅಧಿಕಾರಿಗಳ ಕ್ರಮ ಇಂದು ಪರಿಣಾಮ ಬಿರಿದೆ.
ವೀಕೆಂಡ್ ಲಾಕ್‍ಡೌನ್ ಸೇರಿದಂತೆ ಭಾನುವಾರದ ಸಂತೆಯಲ್ಲಿ ತರಕಾರಿ ಕೊಳ್ಳಲು ಮುಗಿ ಬೀಳುತ್ತಿದ್ದ ಜನ ವರ್ತಕರ ನಿಯಮ ಪಾಲನೆಯ ನಡೆಯಿಂದ ಇಂದು ವ್ಯವಸ್ಥಿತವಾಗಿ ಬಂದು ಖರೀದಿಸುವ ಕ್ರಿಯೆಯಲ್ಲಿ ತೊಡಗಿದ್ದು ನೋಡಲು ಸಹ ಸುಂದರ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.
ಇಂದು ಬಹುತೇಕರ ಎಪಿಎಂಸಿ ಕಡೆ ಸುಳಿಯಲೇ ಇಲ್ಲ ನಗರದ ವಿವಿಧಡೆ ತಾತ್ಕಾಲಿಕ ಮಾರುಕಟ್ಟೆಗಳನ್ನು ತೆರೆದಿದ್ದು ಅಲ್ಲಿಯೂ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಸೇರಿದಂತೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ತೊರ್ಪಡಿಸಿದರು.
ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ತಹಶೀಲ್ದಾರ ಎಚ್, ವಿಶ್ವನಾಥ, ಡಿವೈಎಸ್ಪಿ ವಿ. ರಘುಕುಮಾರ, ಪೌರಾಯುಕ್ತ ಮನ್ಸೂರ್ ಅಲಿ, ಪರಿಸರ ಎಂಜಿನಿಯರ್ ಆರತಿ, ರವಿಕುಮಾರ್ ಸೇರಿದಂತೆ ಅಧಿಕಾರಿಗಳ ಶ್ರಮ ಸಾರ್ಥಕ ಎನ್ನುವಂತಹ ವಾತಾವರಣ ನಿರ್ಮಾಣವಾಗಿದ್ದು ನೆಮ್ಮದಿಗೆ ಕಾರಣವಾಗಿದೆ.
ಬಡವರಿಗಷ್ಟೇ ಕೋವಿಡ್ ನಿಯಮಾವಳಿಗಳು – ಸಾಮಾನ್ಯರ ಆಕ್ರೋಶ
ಸಾಮಾನ್ಯರ ಮೇಲೆ ಆಕ್ರೋಶ ತೋರುವ ಅಧಿಕಾರಿಗಳು ದೊಡ್ಡವರ ಕ್ರಮಗಳನ್ನು ಕಂಡು ಕಾಣದಂತೆ ವರ್ತಿಸುತ್ತಾರೆ ಎಂದು ವ್ಯಾಪಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಗಣ್ಯಾತಿ ಗಣ್ಯರು ನಿಯಮಗಳನ್ನು ಉಲ್ಲಂಘಸಿದ ಅನೇಕ ಪ್ರಕರಣಗಳು ಕಂಡರು ಕಾಣದಂತೆ ಇರುವುದು ವಿಷಾದನೀಯ ಭಾನುವಾರ ನಗರದಲ್ಲಿ ನಿಧನರಾದವರೊಬ್ಬರ ಅಂತ್ಯಕ್ರೀಯೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಅಲ್ಲದೆ ಅಂತಿಮ ಯಾತ್ರೆಯಲ್ಲಿ 50ಕ್ಕೂ ಹೆಚ್ಚು ವಾಹನಗಳು, 20ಕ್ಕೂ ಹೆಚ್ಚು ಕಾರುಗಳು ಪಾಲ್ಗೊಂಡು ಬಹಿರಂಗವಾಗಿಯೇ ಗಣ್ಯರು ಪ್ರಭಾವಿಗಳ ಹಿಂಬಾಲಕರು ಪಾಲ್ಗೊಂಡ ಕಾರಣಕ್ಕೆ ಸುಮ್ಮನಿರುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.