ವ್ಯವಸ್ಥಿತವಾದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರ

ಸುಳ್ಯ, ಮೇ ೨- ಸುಳ್ಯದ ಲಸಿಕಾ ಕೇಂದ್ರ ಸ್ಥಳಾಂತರಗೊಂಡ ಆರಂಭದ ದಿನ ಕೆಲವೊಂದು ಸಮಸ್ಯೆಗಳು, ಗೊಂದಲಗಳು ಎದುರಾಗಿದ್ದರೂ ಶನಿವಾರ ಪುರಭವನದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿತ್ತು
ಲಸಿಕೆ ಹಾಕಲು ಬರುವವರ ಸಂಖ್ಯೆ ಹೆಚ್ಚಾಗಿದ್ದರೂ ಬಂದವರಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸೀಲ್ ಹಾಕಿದ ಟೋಕನ್ ನೀಡಲಾಗುತಿದೆ. ಮತ್ತು ಬಂದವರಿಗೆ ಲಸಿಕೆ ಹಾಕಿಸಲು ಸಮಯವನ್ನು ನೀಡಲಾಗುತಿದೆ. ಒಂದು ಗಂಟೆಯಲ್ಲಿ ೩೦ ಮಂದಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಾಕಲು ನೀಡಿದ ಸಮಯಕ್ಕೆ ಅವರು ಬಂದರೆ ಲಸಿಕೆ ನೀಡಲಾಗುತ್ತದೆ. ಸ್ಥಳದಲ್ಲೇ ಕಾಯುವವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.ಎರಡು ಕಡೆ ನೋಂದಣಿ ಮಾಡಲಾಗುತ್ತದೆ. ವೇಗದ ಕೇಬಲ್ ಇಂಟರ್ ನೆಟ್ ವ್ಯವಸ್ಥೆ ಒದಗಿಸಲಾಗಿದೆ. ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕಲು ಬಂದವರಿಗೆ ಸೇವಾ ಭಾರತಿಯ ವತಿಯಿಂದ ಗಂಜಿ ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋವಿಡ್ ಕೇಂದ್ರಕ್ಕೆ ಆಗಮಿಸುವವರಿಗೆ ಎಲ್ಲಾ ಸಹಾಯಕ್ಕಾಗಿ ಸೇವಾ ಭಾರತಿ ಕಾರ್ಯಕರ್ತರ ತಂಡ ಕಾರ್ಯಪ್ರವೃತ್ತರಾಗಿದ್ದಾರೆ.