ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ.


ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಸೆ,5-  ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ  ಸ್ಥಳೀಯ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಎಚ್ ನೇತ್ರಾವತಿ ವಹಿಸಿದ್ದರು.
ಹರಪನಹಳ್ಳಿ ಪಟ್ಟಣದ ನಗರದಲ್ಲಿರುವ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು  93ನೇಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ  2022- 23ನೇ ಸಾಲಿನಲ್ಲಿ ರಸಗೊಬ್ಬರ ಮತ್ತು ಚಿಲ್ಲರೆ ನ್ಯಾಯಬೆಲೆ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಉತ್ಪನ್ನಗಳನ್ನು ಸೇರಿಸಿ ಒಟ್ಟು 14, 04,67,588-40ರೂ.ಗಳ ವ್ಯವಹಾರವನ್ನು ಮಾಡಿ ರೂ 16,91,118-7 4ರೂ ಗಳ ವ್ಯಾಪಾರಿ ಲಾಭವನ್ನು 2022- 23ನೇ ಸಾಲಿಗೆ ದಿನಾಂಕ 31.3.2023 ಕ್ಕೆ ಸಂಘವು ಮೇಲಿನ ವ್ಯವಹಾರ ಲಾಭ ಹಾಗೂ ಬಾಡಿಗೆಗಳ ಆದಾಯ ಮತ್ತು ಬಿಡಿಪಿ ಯೋಜನೆಯ ಡಿಯಲ್ಲಿ ಈ ಸಾಲಿಗೆ ರೂ 4,87,364-45 ನಿವ್ವಳ ಲಾಭ ಗಳಿಸಿರುತ್ತದೆ ಮತ್ತು ಕೂಡಿಕೃತ ಒಟ್ಟು ಲಾಭ 47,52,335-89 ಹೊಂದಿರುತ್ತದೆ. ಎಂದು ಶ್ರೀ ಟಿ ತಿರುಪತಿ ಕಾರ್ಯದರ್ಶಿ (ಪ್ರಭಾರ) ಅವರು ಸಭೆಯಲ್ಲಿ ತಿಳಿಸಿದರು
ಸಂಘವು ನಿಯಂತ್ರಿತ ಚಿಲ್ಲರೆ ಪಡಿತರ ವ್ಯವಹಾರವನ್ನು ಮಾಡಲಾಗುತ್ತಿದೆ ಹಾಗೂ ಇನ್ನು ಮುಂದೆ ಹಾನಿಯಂತ್ರಿತ ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವ ಹಾರವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗಿದೆ ರೈತರಿಗೆ ರಸಗೊಬ್ಬರ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕಾಗಿದೆ ಕಾರಣ ಸಂಘದ ಎಲ್ಲಾ ಸದಸ್ಯರುಗಳು ಮತ್ತು ಹರಪನಹಳ್ಳಿ ತಾಲೂಕಿನ ಎಲ್ಲಾ ರೈತರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿಕೊಳ್ಳುತ್ತೇವೆ ಹಾಗೂ ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರುಗಳಿಗೆ ಅನುಕೂಲಕ್ಕಾಗಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡಲು ಪ್ರಾರಂಭಿಸಲಾಗುವುದು ಎಲ್ಲಾ ಸದಸ್ಯರುಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಲ್ ಬಿ ಹಾಲೇಶ್ ನಾಯಕ್ ಟಿಎಟಿಸಿಎಂಎಸ್ ಹರಪನಹಳ್ಳಿ ನಿರ್ದೇಶಕರು ವಿನಂತಿಸಿದರು
ಸಂಘವು 1930 ನೇ ಇಸ್ವಿಯಲ್ಲಿ ಸ್ಥಾಪನೆಯಾಗಿದ್ದು ಸಂಘದ 2022 23ನೇ ಸಾಲಿನ 93ನೇ ವಾರ್ಷಿಕ ಸರ್ವ ಸದಸ್ಯರ ಸಭೆಗೆ ತಮ್ಮನ್ನು ಸಂಘದ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ 2022 -23ನೇ ಸಾಲಿನ ವಾರ್ಷಿಕ ವರದಿ ಹಾಗೂ 2022- 23ನೇ ಸಾಲಿನ ಆರ್ಥಿಕ ತ:ಖ್ತೆಗಳು ಹಾಗೂ ದಿನಾಂಕ 31.3.2023ರ ಅಂತ್ಯದಲ್ಲಿದ್ದಂತೆ ಆಸ್ತಿ ಜವಾಬ್ದಾರಿ ತ:ಖ್ತೆ ಗಳು ಅವಗಾಹನೆಗೆ ಮತ್ತು ಅಂಗೀಕಾರಕ್ಕೆ ಸಾದರಪಡಿಸಲಾಗಿದೆ ಮತ್ತು ಸಂಘವು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ, ಇಪ್ಕೋ ಸಂಸ್ಥೆ, ಮತ್ತು ಇತರೆ ಸಹಕಾರ ಸಂಘಗಳಲ್ಲಿ ಹಾಗೂ ರಾಷ್ಟ್ರೀಯ ಪತ್ರಗಳಲ್ಲಿ ಮತ್ತು ಎಚ್ ಪಿಸಿಎಲ್ ಕಂಪನಿ ಮತ್ತು ಬ್ಯಾಂಕುಗಳಲ್ಲಿಯ ಠೇವಣಿ ಸೇರಿ ಒಟ್ಟು ರೂ 99,03,177-30ಗಳ ಬಂಡವಾಳವನ್ನು ಹೂಡಿರುತ್ತದೆ ಎಂದು ಶ್ರೀ ಪಿ ಪ್ರೇಮ್ ಕುಮಾರ್ ಟಿಎಟಿಸಿಎಂಎಸ್ ನಿರ್ದೇಶಕರು ತಿಳಿಸಿದರು.
 ಈ ಸಂದರ್ಭದಲ್ಲಿ ಪುಷ್ಪ ದಿವಾಕರ್, ಟಿಎಟಿಸಿಎಂಎಸ್ ಉಪಾಧ್ಯಕ್ಷರು ಶ್ರೀ ಬಿ ಕುಲುಮಿ ಅಬ್ದುಲ್ಲಾ ನಿರ್ದೇಶಕರುಗಳಾದ ಬಿಕೆ ಪ್ರಕಾಶ್ ಹೆಚ್ ತಿಮ್ಮಾ ನಾಯಕ್  ಶ್ರೀ ತಳವಾರ್ ಮಂಜಪ್ಪ ಶ್ರೀ ಗಿಡ್ಡಳ್ಳಿ ನಾಗರಾಜ್ ಶ್ರೀ ರೇವಣಸಿದ್ದಪ್ಪ ಶ್ರೀ ಎಂ ವಿ ಕೃಷ್ಣಕಾಂತ್  ಕೆ ವಿರೂಪಾಕ್ಷಪ್ಪ ಯು ಹನುಮಂತಪ್ಪ ಪ್ರಕಾಶ್ ಗೌಡ ಡಿಜಿ ಶ್ರೀಮತಿ ಮಂಜುಳಾಮೂರ್ತಿ   ಶ್ರೀ ಚಿಕ್ಕೇರಿ ಬಸಪ್ಪ .ಡಿ ಅಬ್ದುಲ್ ರೆಹಮಾನ್ ಸಾಬ್ ಶ್ರೀ ಚಿಕ್ಕೇರಿ ವೆಂಕಪ್ಪ ಮೆಹಬೂಬ್ ಸಾಬ್ ಸರ್ವ ಸದಸ್ಯರುಗಳು ಮತ್ತು ಕಚೇರಿಯ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.