ವ್ಯಕ್ತಿ ಜೀವ ಉಳಿಸಲು , ರಕ್ತದಾನ ಸಹಾಯಕ


ಸಂಜೆವಾಣಿ ವಾರ್ತೆ
ಸಂಡೂರು :ಜು: 26:  ವ್ಯಕ್ತಿ ಜೀವ ಉಳಿಸಲು, ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ರಕ್ತದಾನ, ವಿದ್ಯಾದಾನ, ನೇತ್ರದಾನ, ಅನ್ನದಾನ ಪ್ರತಿಯೊಬ್ಬರೂ ಮುಂದೆ ಬರಬೇಕು, ಇಂತಹ ಗುಣ ನಮ್ಮ ಯುವಕರಲ್ಲಿ ಬಂದಾಗ ಉತ್ತಮ ಸಮಾಜ ನಿರ್ಮಾಣ ಕ್ಕೆ ನಾಂದಿಯಾಗುತ್ತದೆ ಎಂದು ಹಿರಿಯರು ಶಿವಾನುಭವಗೋಷ್ಠಿಯ ಅಧ್ಯಕ್ಷರು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅರಳಿಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದೆಲ್.ಬಿ. ಕಾಲೋನಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ, ಜಿಲ್ಲಾ ಟಾಸ್ಕ್ ಪೋರ್ಸ ಸಮಿತಿ, ಬಳ್ಳಾರಿ, ಶ್ರೀ ಸಇದ್ದರಾಮೇಶ್ವರ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರ ಸಂಡೂರು ಇವರ 16ನೇ ವಾರ್ಷಿಕೋತ್ಸವದ ಅಂಗವಾಗಿ 13ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಸಂತೋಷದಿಂದ ಬನ್ನಿ ಜೀವ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ, ಇಂದಿನ ದಿನಮಾನದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಉಂಟಾಗುತ್ತದೆ ಕಾರಣ ಅಪಘಾತ, ಹೆರಿಗೆ, ಅಪರೇಷನ್ ಸಂದರ್ಭದಲ್ಲಿ ಬೇಕು, ಅದ್ದರಿಂದ ಎಲ್ಲಾ ರೀತಿಯ ಸಂಘ ಸಂಸ್ಥೆಯವರು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ರಕ್ತದಾನ ಶ್ರೇಷ್ಠದಾನವಾಗಿದ್ದು ಪ್ರತಿಯೊಬ್ಬ ಯುವಕರೂ ಸಹ ಇಂತಹ ದಾನದ ಗುಣವನ್ನು ಬೆಳೆಸಿಕೊಂಡಾಗ ಸಾವಿನ ದವಡೆಯಲ್ಲಿದ್ದವರನ್ನು ಬದುಕಿಸಿದ ಹೆಮ್ಮೆ ನಿಮ್ಮದಾಗುತ್ತದೆ ಎಂದು ಡಾ. ಮಂಜುನಾಥ ತಿಳಿಸಿದರು. ಮುಂದುವರೆದು ಮಾತನಾಡಿ    ರಕ್ತವನ್ನು ಹೆಣ್ಣು ಗಂಡು ಎಂಭ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು, ಗಂಡುಮಕ್ಕಳು 3 ತಿಂಗಳಿಗೆ ಒಮ್ಮೆ, ಹೆಣ್ಣುಮಕ್ಕಳು 4 ತಿಂಗಳಿಗೆ ಒಮ್ಮೆ ದಾನ ಮಾಡಬಹುದು, ದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿರಬೇಕು, ಹಿಮೋಗ್ಲೋಬಿನ್ 12.5 ಗ್ರಾಂ ಗಿಂತ ಹೆಚ್ಚಿರಬೇಕು, ಸಿಸ್ಟೋಲಿಕ್ ರಕ್ತದೊತ್ತಡವು 100 ರಿಂದ 140 ಇರುವವರು ದಾನ ಮಾಡಬಹುದು, ಇದರಿಂದ ಹೊರ ರಕ್ತ ಉತ್ಪತ್ತಿಯಾಗುತ್ತದೆ, ಜ್ಞಾಪಕ ಶಕ್ತಿ ವೃದ್ದಿ, ಕೊಬ್ಬಿನಾಂಶ ಕಡಿಮೆಯಾಗುತ್ತದೆ, ಶೇ. 80 ಕ್ಕಿಂತಲೂ ಜಾಸ್ತಿ ಹೃದಯಾಘಾತ ತಡೆಯುತ್ತದೆ, ರಕ್ತದ ಒತ್ತಡ ಇತರೆ ರೋಗಗಳನ್ನು ತಡೆಗಟ್ಟಲು ರಕ್ತ ದಾನ ಸಹಕಾರಿಯಾಗಿದೆ, ಅದ್ದರಿಂದ ರಕ್ತದಾನ ಇನ್ನೋಬ್ಬರ ಜೀವ ಉಳಿಸಿದ ಅಂಶವೂ ನಿಮ್ಮದಾಗುತ್ತದೆ ಎಂದರು.
ಶಿಬಿರದಲ್ಲಿಬಳ್ಳಾರಿಯ ಶ್ರೀ ವಿವೇಕಾನಂದ ರಕ್ತ ಸಂಗ್ರಹ ಕೇಂದ್ರದ ಸಿಬ್ಬಂದಿ,ಪುರಸಭೆಯ ಮಾಜಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಅಶಾಲತಾ ಸೋಮಪ್ಪ, ಕೇಂದ್ರದ ರಾಮಲಕ್ಷ್ಮೀ.ಬಿ., ಶಶಿಕಲಾ, ಬಸವರಾಜ, ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥರಾದ ಅಂಕಮನಾಳ್ ಸಿದ್ದರಾಮೇಶ್, ಅಂಕಮನಾಳ್ ಗಿರಿಜಮ್ಮ, ಸುವರ್ಣಮ್ಮ, ಆಂಕಮನಾಳ್ ಶಾಂತಮ್ಮ, ಶೋಭಕ್ಕ, ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.