ವ್ಯಕ್ತಿ ಕೊಲೆ

ನಿಡಗುಂದಿ:ನ.16: ಪಟ್ಟಣದ ಹೊರವಲಯದ ಪ್ರದೇಶದಲ್ಲಿ ಅಪರಿಚಿತರು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ಜರುಗಿದೆ.
ಪಟ್ಟಣದ ತಿಪ್ಪಣ್ಣ ರಾಮಚಂದ್ರ ಗೊಂಧಳಿ ಕೊಲೆಗೀಡಾದ ದುರ್ದೈವಿ.
ಪಟ್ಟಣದ ವಿಜಯಲಕ್ಷ್ಮಿ ವೈನ್ ಶಾಪ್ ಹಿಂದುಗಡೆ ಗುಡ್ಡದ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು ಸೋಮವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ನಿಡಗುಂದಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.