ವ್ಯಕ್ತಿ ಕೊಲೆಗೈದು ಡಿಕ್ಕಿಯಲ್ಲಿ ಶವವಿಟ್ಟು ಕಾರಿಗೆ ಬೆಂಕಿ

ಹಾಸನ,ಅ.೨೮-ಕಾರು ಸಮೇತ ವ್ಯಕ್ತಿಯೊಬ್ಬನನ್ನು ಸುಟ್ಟು ಕೂಲೆ ಮಾಡಿರುವ ದಾರುಣ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಬಳಿ ನಡೆದಿದೆ.
ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ ಮಾಡಿ ಕಾರ್‌ನ ಡಿಕ್ಕಿಯಲ್ಲಿ ಮೃತದೇಹವಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೭೫ರ ಸಮೀಪವೇ ಭೀಕರ ಕೃತ್ಯ ನಡೆದಿದೆ.
ಮೃತ ವ್ಯಕ್ತಿ ಗುರುತು ಸಿಗಲಾರದಷ್ಟು ಶವ ಸುಟ್ಟುಹೋಗಿದೆ.ಗುರುತು ಪತ್ತೆಯಾಗದಿರಲಿ ಎನ್ನುವ ಕಾರಣಕ್ಕೆ ದುಷ್ಕರ್ಮಿಗಳು ಈ ರೀತಿಯ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ
ಹಿರಿಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.