ವ್ಯಕ್ತಿ ಕಾಣೆ

ಧಾರವಾಡ, ಏ.6: ಧಾರವಾಡ ನಗರದ ಶ್ರೀರಾಮನಗರ ತುಳಜಾಭವಾನಿ ಗುಡಿ ಹತ್ತಿರದ ನಿವಾಸಿ ಮಲ್ಲಿಕಾರ್ಜುನಗೌಡ ಪಾಟೀಲ ಅವರು ಏ.2 ರಂದು ಕಾಣೆಯಾಗಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

75 ವಯಸ್ಸಿನ ಮಲ್ಲಿಕಾರ್ಜುನ ಅವರಿಗೆ ಮರೆವಿನ ಕಾಯಿಲೆ ಇದ್ದು, ಅವರು ತಮ್ಮ ಹೆಸರು ಮಾತ್ರ ಹೇಳುತ್ತಾರೆ. ಏ.2 ರಂದು ಶ್ರೀರಾಮನಗರದಲ್ಲಿರುವ ಶಿವಾಲಯ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿದ ಅವರು ಮನೆಗೆ ಹಿಂದಿರುಗಿರುವುದಿಲ್ಲ. ಕಾಣೆಯಾದ ವ್ಯಕ್ತಿ ದುಂಡು ಮುಖ, ಗೋಧಿ ಮೈಬಣ್ಣ, ಬಿಳಿ ಕೂದಲು, ಏರು ಹಣೆ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಬಣ್ಣದ ಶರ್ಟ್ ಹಾಗೂ ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

ಇವರ ಕುರಿತು ಮಾಹಿತಿ ಸಿಕ್ಕಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆ ದೂ.ಸಂ: 0836 2233513, 9480802034 ಹಾಗೂ ಹುಬ್ಬಳ್ಳಿ-ಧಾರವಾಡ ಕಂಟ್ರೋಲ್ ರೂಂ.ನಂ: 0836 2233555 ಗೆ ಸಂಪರ್ಕಿಸುವಂತೆ ವಿದ್ಯಾಗಿರಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.