ವ್ಯಕ್ತಿ ಕಾಣೆ

ಹುಬ್ಬಳ್ಳಿ, ಮಾ 30: ನಗರದ ಬೆಟಗೇರಿ ನಿವಾಸಿ ಮುಕ್ತುಮಸಾಬ ಬೆಟಗೇರಿ (50) ಇವರು ಕಳೆದ ದಿ.23 ರಂದು ಬೆಳಿಗ್ಗೆ 3:30 ಗಂಟೆಗೆ ಕಾಣೆಯಾಗಿದ್ದಾರೆ ಎಂದು ಬೆಂಡಿಗೇರಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು 5 ಅಡಿ 7 ಇಂಚು ಎತ್ತರವನ್ನು ಹೊಂದಿದ್ದು, ಕೆಂಪು ಬಣ್ಣದ ಗೆರೆವುಳ್ಳ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾರೆ. ಸಾದಕಪ್ಪು ಮೈಬಣ್ಣ ಹೊಂದಿದ್ದ ಇವರು ಕನ್ನಡ, ಹಿಂದಿ, ಉರ್ದು ಬಾಷೆ ಬಲ್ಲವರಾಗಿದ್ದಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ , ಬೆಂಡಿಗೇರಿ ಪೆÇೀಲಿಸ್ ಠಾಣೆ ಹುಬ್ಬಳ್ಳಿ 9480802035 ಅಥವಾ 0836-2233526 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.