ವ್ಯಕ್ತಿ ಕಾಣೆ

ಬಳ್ಳಾರಿ,ಮಾ.26:ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 65 ವರ್ಷದ ಹೊನ್ನೂರ್‍ಸಾಬ್ ಎಂಬ ವ್ಯಕ್ತಿ ಜ.27ರಂದು ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಾಜು 5.6 ಅಡಿ ಎತ್ತರ, ಕೋಲು ಮುಖ,ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ತುಂಬು ತೋಳಿನ ಅಂಗಿ ಮತ್ತು ಕಲರ್ ಲುಂಗಿ ಧರಿಸಿರುತ್ತಾನೆ. ಇವರಿಗೆ ಕನ್ನಡ, ತೆಲುಗು, ಹಿಂದಿ ಮಾತನಾಡಲು ಬರುತ್ತದೆ.ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆಯ ದೂ.ಸಂ.08392-263433 ಗೆ ಸಂಪರ್ಕಿಸಲು ಕೋರಿದೆ.