ವ್ಯಕ್ತಿ ಕಾಣೆ; ಪ್ರಕರಣ ದಾಖಲು


ಹೊಸಪೇಟೆ(ವಿಜಯನಗರ),ಜೂ.08: ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 55 ವರ್ಷದ ಗೋಪಿ ಜಿ.ಟಿ. ಎನ್ನುವ ವ್ಯಕ್ತಿ ಕಾಣೆಯಾದ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ: 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕುತ್ತಿಗೆಯ ಕೆಳಭಾಗದಲ್ಲಿ ಹಳೇ ಗಾಯದ ಗುರುತು ಇರುತ್ತದೆ. ಕಾಣೆಯಾದ ದಿನ ಬಿಳಿ ಮತ್ತು ಕಪ್ಪು ಬಣ್ಣದ ಚೆಕ್ಸ್ ಟಿ-ಶರ್ಟ್ ಹಾಗೂ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಪಟ್ಟಣ ಪೊಲೀಸ್ ಠಾಣೆ ದೂ.08394-224033, ಪಿಐ ದೂ.9480805745, ಡಿವೈಎಸ್ಪಿ ಹೊಸಪೇಟೆ ಉಪವಿಭಾಗ ದೂ.08394-224204, ಎಸ್ಪಿ ವಿಜಯನಗರ ದೂ.08394-258400 ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.9480805700 ಸಂಖ್ಯೆಗೆ ಸಂಪರ್ಕಿಸಬಹುದು.