ವ್ಯಕ್ತಿ ಕಾಣೆ ದೂರು ದಾಖಲು

ಬಳ್ಳಾರಿ,ನ.05: ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ 34 ವರ್ಷದ ಮಹಮ್ಮದ್ ಇಮ್ರಾನ್ ಎಂಬ ವ್ಯಕ್ತಿ 2018ರ ಡಿಸೆಂಬರ್ 12 ರಿಂದ ಕಾಣೆಯಾಗಿದ್ದು. 5.9 ಅಡಿ ಎತ್ತರ, ದೃಢವಾಗ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಇರುತ್ತದೆ. ತೆಲಗು, ಹಿಂದಿ, ಉರ್ದು, ಅರಬ್ಬಿ ಭಾಷೆಯನ್ನು ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಮುಖದ ಎರಡೂ ಕಪಾಳದ ಮೇಲೆ ಸಣ್ಣ, ಸಣ್ಣ ಕಪ್ಪುಮಚ್ಚೆ ಮತ್ತು ಐಬ್ರಾ ಮೇಲೆ ಹಳೇ ಗಾಯದ ಗುರುತು ಇರುತ್ತದೆ.
ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಹತ್ತಿರ ಪೊಲೀಸ್ ಠಾಣೆಗೆ ಅಥವಾ ಕೂಡ್ಲಿಗಿ ಪೊಲೀಸ್ ಠಾಣೆಯ ಮೊ.ಸಂ. 9620582687, 8861686247 ಮತ್ತು 8332826922ಗೆ ಸಂಪರ್ಕಿಸಬೇಕು.