
ಬೀದರ:ಸೆ.7:ಯಾವುದೇ ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಅಥವಾ ವ್ಯಕ್ತಿಯ ವಿಕಸನ ಆಗಬೇಕಾದರೆ ಅದರ ಹಿಂದೆ ಗುರುವಿನ ಶ್ರಮವೇ ಮುಖ್ಯವಾದುದು. ಶಿಕ್ಷಣವೇ ಶಕ್ತಿ. ಶಿಕ್ಷಣದಿಂದಲೇ ಸರ್ವಸ್ವವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು. ಅವರು ಇಂದು ಕರ್ನಾಟಕ ಶಿಕ್ಷಕರ ವಿಕಾಸ ಪರಿಷತ್ತು,ಸ್ಪರ್ಧಾ ಅಕಾಡೆಮಿ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ಡಾ. ಕೇರ್ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ ಭಾರತಿ ನ್ಯೂ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಪಡೆದುಕೊಳ್ಳದೆ ಸಾಮಾಜಿಕ ಮೌಲ್ಯವನ್ನು ಅರಿತುಕೊಳ್ಳಬೇಕು. ಆಧುನಿಕ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣವನ್ನು ಪಡೆದು ರಾಷ್ಟ್ರದ ಸವಾರ್ಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದಲ್ಲಿ ಶಿಕ್ಷಕರಿಗೆ ನೀಡಿದ ಗೌರವ ಅರ್ಥಪೂರ್ಣವಾಗುತ್ತದೆ.
ಶಿಕ್ಷಣವು ವ್ಯಾಪಾರಿಕರಣ ವಾಗದೆ ಗುರು ಪರಂಪರೆ ಯ ವಿದ್ಯಾಮಂದಿರಗಳಾ ಗಬೇಕು. ಇಂದಿಗೂ ಭಾರತ ದೇಶದಲ್ಲಿ ಶಿಕ್ಷಕರಿಗೆ ದೇವರ ಸಮಾನ ಎಂದು ಭಾವಿಸ ಲಾಗುತ್ತದೆ ಇದನ್ನು ಹೀಗೆ ಮುಂದುವರೆಯಲು ಶಿಕ್ಷಕರು ಸಮರ್ಪಣ ಭಾವದಿಂದ ಮಕ್ಕಳಿಗೆ ವಿದ್ಯಾದಾನವನ್ನು ಮಾಡಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳಾದ ಸಂಜೀವ ಕುಮಾರಸ್ವಾಮಿ ಅವರು ಮಾತನಾಡಿ, ಇಂದಿನ ಮಕ್ಕಳ ಬುದ್ಧಿಯು ಕಂಪ್ಯೂಟರ ನಂತೆ ಬಹಳ ಚುರುಕಾಗಿದೆ. ಮಕ್ಕಳಿಗೆ ಶಿಕ್ಷಕರು ತಿಳಿಸಿದ ವಿಷಯ ವನ್ನು ಬೇಗನೆ ಸಂಗ್ರಹಿಸಿ ಕೊಳ್ಳುವ ಶಕ್ತಿ ಇರುವುದ ರಿಂದ ಮಕ್ಕಳಿಗೆ ಆಧುನಿಕ, ವೈಜ್ಞಾನಿಕ ಮತ್ತು ನೈತಿಕ ಶಿಕ್ಷಣವನ್ನು ನೀಡಲಾಗುತ್ತಿದೆ ಆದ್ದರಿಂದಲೇ ವಿಶ್ವವು ಪ್ರಗ ತಿಯ ಪಥದಲ್ಲಿ ಸಾಗುತ್ತಿರು ವುದು ಎಂದು ತಿಳಿಸಿದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿ ಯ ಅಧ್ಯಕ್ಷರಾದ ನಾಗೇಶ್ ಸ್ವಾಮಿ ಅವರು ಮಾತನಾಡಿ ರಾಷ್ಟ್ರಪತಿಗಳಾದ ಸರ್ವ ಪಲ್ಲಿ ರಾಧಾಕೃಷ್ಣನ್ ರವರು ಆದರ್ಶ ಶಿಕ್ಷಕರಾಗಿದ್ದರು. ಶಿಕ್ಷಕರ ಮೇಲೆ ಅಪಾರ ಗೌರವವಿತ್ತು. ಅವರು ರಾಷ್ಟ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿ ದ್ದರು. ಅವರ ದಿನಾಚರಣೆ ಯನ್ನು’ ಶಿಕ್ಷಕರ ದಿನಾಚರಣೆ’ ಯನ್ನಾಗಿ ಮಾಡುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯ. ಸರ್ವ ಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ವಿಚಾರಗಳನ್ನು ಎಲ್ಲಾ ಶಿಕ್ಷಕರು ಮೈಗೂಡಿಸಿ ಕೊಳ್ಳಬೇಕೆಂದು ನುಡಿದರು.
ದಯಾನಂದ್ ರೆಡ್ಡಿ ಬರೂರ್
ಶಿಕ್ಷಕರಾದ ಜಯಸಿಂಗ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು