ವ್ಯಕ್ತಿಯ ಕೊಲೆಗೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಬಂಟ್ವಾಳ, ಸೆ.೧೭- ತಾಲೂಕಿನ ಪುದು ಗ್ರಾಮದ ಕಲ್ಲತಡಮೆಯಲ್ಲಿ ರಿಡ್ಜ್ ಕಾರನ್ನು ಜಖಂಗೊಳಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.

ಕಲ್ಲತಡಮೆ ನಿವಾಸಿ ಧನರಾಜ್ ಅವರ ಕೊಲೆ ಯತ್ನ ನಡೆಸಿದ ಕುಂಪನಮಜಲು ನಿವಾಸಿಗಳಾದ ಮೊಹಮ್ಮದ್ ಹಿದಾಯತ್(೨೫) ಹಾಗೂ ಮೊಹಮ್ಮದ್ ಅಶ್ರಫ್(೨೭) ಬಂಧಿತ ಆರೋಪಿಗಳು. ಪ್ರಕರಣದ ಇತರ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಅವರ ನಿರ್ದೇಶನದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಸಂಜೀವ ಹಾಗೂ ಸಿಬ್ಬಂದಿ ವಿಶೇಷ ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.