ವ್ಯಕ್ತಿತ್ವ ವಿಕಸನ ಅಭಿವೃದ್ಧಿ ತರಬೇತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.12: ಇಂದು ಬಳ್ಳಾರಿಯ ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆವ್ ವ್ಯಕ್ತಿತ್ವ ವಿಕಸನ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೆಚ್.ಖಾಜಾ  ಅಸಿಸ್ಟೆಂಟ್ ಮ್ಯಾನೇಜರ್ ಜಿಲೇಟ್  , ಎನ್ ವೀರೇಶ್ ಅಸಿಸ್ಟೆಂಟ್ ಮ್ಯಾನೇಜರ್ ವಿಜಯ ಕರ್ನಾಟಕ ಪತ್ರಿಕೆ ಮತ್ತು  ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್‍ಕುಮಾರ್‍ರವರು ಹಾಗೂ ಪ್ರಾಂಶುಪಾಲರಾದ ಡಾ.ಟಿ.ಎಂ.ಗಂಗಾಧರಸ್ವಾಮಿಯವರು ಹಾಜರಿದ್ದು ಆಡಳಿತ  ಮಂಡಳಿಯ ಸದಸ್ಯರಾದ ಹೆಚ್. ವಿಜಯಕುಮಾರ್, ಎ.ವೀರನಗೌಡ, ಎಸ್.ಚಂದ್ರಶೇಖರ್ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು , ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಕಾಲೇಜಿನ ಅಧ್ಯಕ್ಷರು  ಮಾತನಾಡುತ್ತಾ ಶಿಸ್ತು ಸಂಯಮ ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು ಹೇಗೆ ಮತ್ತು ಅದರ ಉಪಯೋಗಗಳನ್ನು ತಿಳಿಸಿದರು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ವಿದ್ಯಾರ್ಥಿಗಳಿಗೆ ಉಪಯೊಗವಾಗುತ್ತದೆ. ಹಾಗೂ ಹೊಸ ಆವಿಷ್ಕಾರಗಳು ಈ ಆಧುನಿಕ ಜೀವನಕ್ಕೆ ಮುಖ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಆಯೋಜಕರು ಮತ್ತು ಪ್ರಾದ್ಯಾಪಕರಾದ ಕುಲ್ಲಯ್ಯ ಸ್ವಾಮಿ. ವಂದನಾರ್ಪಣೆಯನ್ನು ನಡೆಸಿಕೊಟ್ಟರು.