ವ್ಯಕ್ತಿತ್ವ ವಿಕಸನಕ್ಕೆ ರಾ.ಸೇ.ಯೋಜನೆ ಸಹಕಾರಿ-ಡಾ.ಕೆ.ಶಿವಶಂಕರ

ದಾವಣಗೆರೆ.ಜೂ.೨೧; ದಾವಣಗೆರೆ ವಿವಿಯ ರಾಷ್ಟ್ರೀಯ ಸೇವಾಯೋಜನಾ ವಿಭಾಗ ಹಾಗೂ ವಿಶ್ವ ವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯ  ಸಹಯೋಗದಲ್ಲಿ  “ಸ್ವಚ್ಛ ಭಾರತ ಆಂದೋಲನ&ಪ್ಲಾಸ್ಟಿಕ್ ಮುಕ್ತ ಭಾರತ”ಘೋಷಣೆಯೊಂದಿಗೆ 2022-23ನೇ ಸಾಲಿನ ರಾ.ಸೇ.ಯೋ ವಿಶೇಷ ವಾರ್ಷಿಕ ಶಿಬಿರ  ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಆರಂಭಗೊಂಡಿದ್ದು -ಗಿಡಕ್ಕೆ ನೀರೆರೆಯುವುದರ ಮೂಲಕ ಈ ಶಿಬಿರಕ್ಕೆ ದಾವಣಗೆರೆ ವಿ ವಿ ಪರೀಕ್ಷಾಂಗ ಕುಲಸಚಿವರಾದ ಡಾ. ಕೆ .ಶಿವಶಂಕರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ,”ರಾ.ಸೇ.ಯೋಜನೆ ಶಿಬಿರಗಳು ಕಾಲೇಜು ವಿದ್ಯಾರ್ಥಿಗಳು ಅವರ ವ್ಯಕ್ತಿತ್ವ ರೂಪಿಸಿಕೊಳ್ಳಲು, ವಿಕಸನಗೊಳಿಸಿಕೊಳ್ಳಲು ಸಹಕಾರಿ ಆಗುತ್ತವೆ.ರಾ.ಸೇ.ಯೋ ಶಿಬಿರಗಳಲ್ಲಿ ಸಹಬಾಳ್ವೆ, ಸಂಘಟನಾ ಚಾತುರ್ಯ, ಆತ್ಮ ವಿಶ್ವಾಸ ವೃಧ್ಧಿಸಿಕೊಳ್ಳಲು ಅನುಕೂಲವಾಗುವ ಅನೇಕ ಚಟುವಟಿಕೆಗಳು ಆಯೋಜನೆಗೊಳ್ಳುವುದರಿಂದ ಶಿಬಿರಾರ್ಥಿಗಳಿಗೆ ಆ ಎಲ್ಲ ಆಯಾಮಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಸದೃಢಗೊಳಿಸಿಕೊಳ್ಳಲು ಸಹಾಯವಾಗುತ್ತದೆ. ಅಲ್ಲದೆ, ಪ್ರಸ್ತುತ ಶಿಬಿರವು ಪ್ಲಾಸ್ಟಿಕ್ ಮುಕ್ತ ಭಾರತ ದ ಗುರಿ ಹೊಂದಿರುವುದು ಬಹಳ ಔಚಿತ್ಯಪೂರ್ಣ. ಏಕೆಂದರೆ ಇಂದು ಪ್ಲಾಸ್ಟಿಕ್ ಬಳಕೆ ಮಿತಿ ಮೀರಿ ಪರಿಸರಕ್ಕೆ, ಜೀವ ಜಾಲದ ಉಳಿವಿಗೆ ಮಾರಕವಾಗಿದೆ.ಹಾಗಾಗಿ ಈ ಶಿಬಿರದ ಮುಲಕ ನೀವು-ನಾವೆಲ್ಲರೂ ನಮ್ಮಗಳ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ”ಎಂದು ಸಂಕಲ್ಪಬದ್ಧರಾಗಿ ನಡೆಯೋಣ.ಅದರಿಂದ ನಮ್ಮ ಪರಿಸರ-ನಮ್ಮ ದೇಶದ ಪರಿಸರ ವನ್ನು ಸ್ವಚ್ಛವಾಗಿರಿಸಲು ನಾವು ಅಳಿಲು ಸೇವೆಯನ್ನಾದರೂ ಸಲ್ಲಿಸಿದಂತಾಗುತ್ತದೆ” ಎಂದು ನುಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಾ ವಿ ವಿಯ ಕಲಾ ನಿಕಾಯ ಡೀನ್ ಡಾ .ವೆಂಕಟರಾವ್ ಪಲಾಟೆ ಮಾತನಾಡಿ,”ರಾ.ಸೇ.ಯೋಜನೆ ಮುಖ್ಯ ಉದ್ದೇಶ -ಭಾರತೀಯ ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ,ಸಹಬಾಳ್ವೆ, ಸೇವಾಮನೋಭಾವನೆಯಂತಹ ಉತ್ತಮ ಮೌಲ್ಯಗಳನ್ನು ಬಿತ್ತುವುದಾಗಿದೆ.ಕಲೆಗೆ ಈ ರೀತಿಯ ಉತ್ತಮ ಮೌಲ್ಯಗಳ ಆವರಣ ಇದ್ದರೆ ಮಾತ್ರ ಕಲೆ-ಕಲಾವಿದರಿಗೆ ಸಾಮಾಜಿಕ ಗೌರವ ಸಿಗುತ್ತದೆ. ಆದಕಾರಣ ದೃಶ್ಯ ಕಲಾ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಈ ಶಿಬಿರದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತರಬೇತಿ ಪಡೆಯಬೇಕು, ಈ ಶಿಬಿರ ನಿಮ್ಮ ಜೀವನದಲ್ಲಿ ಬೆಳಕಿನ ಕಿರಣ ಹೊಮ್ಮಿಸುವಂತಾಗಲಿ”ಎಂದು ಆಶಿಸಿದರು. ಎನ್. ಎಸ್. ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಪರಶುರಾಮ ಖಟಾವಕರ್ ಎನ್. ಎಸ್. ಎಸ್. ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ದಾವಿವಿ ರಾ.ಸೇ.ಯೋ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ  ವಿ.ಪಾಳೇದ ರಾ.ಸೇ.ಯೋ ಆರಂಭವಾದ ಹಿನ್ನಲೆ,ಉದ್ದೇಶ, ಔಚಿತ್ಯವನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು.ದೃಶ್ಯ ಕಲಾ ಮಹಾವಿದ್ಯಾಲಯ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ್ ಪಂಚಪ್ಪ ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ದೃಶ್ಯ ಕಲಾ ಮಹಾವಿದ್ಯಾಲಯದ ರಾ.ಸೇಯೋ.ಘಟಕ ಕಾರ್ಯಕ್ರಮ ಅಧಿಕಾರಿ ಡಾ.ಜೈರಾಜ ಚಿಕ್ಕ ಪಾಟೀಲ್ ಸ್ವಾಗತ&ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೃಶ್ಯ ಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ  ಎನ್. ಭಟ್ಟ ವಂದಿಸಿದರು.ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಕು.ಮುರಳಿ ಕೃಷ್ಣ ಆರಂಭದಲ್ಲಿ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿ-ಕು.ಕೀರ್ತನಾ ಅಲ್ಫೋನ್ಸಾ ಕಾರ್ಯಕ್ರಮ ನಿರೂಪಿಸಿದರು.  ಶಿಬಿರದ ಪದಾಧಿಕಾರಿಗಳಾದ ಡಾ.ಎಂ.ಕೆ.ಗಿರೀಶ್ ಕುಮಾರ್, ಡಾ.ಸಂತೋಷ ಕುಮಾರ್ ಕುಲಕರ್ಣಿ, ಪ್ರಮೋದ್ ಕೆ.ವಿ. ಹರೀಶ್ ಎಸ್. ಎಚ್,  ಶಿವಶಂಕರ್ ಸುತಾರ್,  ಡಿ.ಎಚ್. ಸುರೇಶ್, . ರಂಗನಾಥ್ ಕುಲಕರ್ಣಿ,  ನಂದಕುಮಾರ್,  ಶೋಬ್ಯಾ ನಾಯ್ಕ, ಶಿವಕುಮಾರ್ ಅಜಗಣ್ಣನವರ್, ರೇವಣಸಿದ್ದಪ್ಪ, ರಮೇಶ್, ಶಿವನಗೌಡ,  ನಾಗರಾಜ್, ನಟರಾಜ್, ಅಜ್ಜಯ್ಯ,ಸಿದ್ದಮ್ಮ,ರೂಪಾ ,ದೃಶ್ಯ ಕಲಾಮಹಾವಿದ್ಯಾಲಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು