ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಸಹಾಯಕ: ಠಾಕೂರ್

ಕಲಬುರಗಿ :ಎ.4:ಹೊರವಲಯದ ಕರ್ನಾಟಕ ರಾಜ್ಯ ಪೆÇಲೀಸ್ ತರಬೇತಿ ಮಾಹಾವಿದ್ಯಾಲಯದ ಸಭಾಂಗಣದಲ್ಲಿ ಕಲಬುರಗಿ ಆರ್ಟ್ ಥಿಯೇಟರ್ ವತಿಯಿಂದ ಕಾಪೆರ್Çರೇಟರ ಕೊಟ್ರೇಗೌಡ ಹಾಸ್ಯ ಪ್ರದರ್ಶನವನ್ನು ಪರ್ತಕರ್ತ ಭವಾನಿಸಿಂಗ್ ಠಾಕೂರ್ ಅವರು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಯುವಕರು ವಿದ್ಯೆಯ ಪಡೆದರೆ ಸಾಲದು ಕ್ರಿಯಾಶೀಲರಾಗಬೇಕು ಪ್ರತಿಯೊಂದು ವಿಷಯ ತಿಳಿದುಕೊಳ್ಳಲು ಹಂಬಲಿಸಬೇಕು ರಂಗಭೂಮಿಯು ಎಲ್ಲವನ್ನೂ ಕಲಿಸುವ ವೇದಿಕೆಯಾಗಿದೆ ಎಂದರು ಕೋವಿಡ್ ಮಹಾಮಾರಿಯಿಂದ ಕಲಾವಿದರ ಬದುಕು ತುಂಬಾ ಕಷ್ಟರವಾಗಿದೆ ಆರ್ಥಿಕ ಬಿಕ್ಕಟ್ಟಿನ ಅನುಭವಿಸುತ್ತಿದ್ದಾರೆ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಒದಗಿಸಿ ಪೆÇ್ರೀತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಎಂ ಯದವಾಡ ಅವರು ಮಾತನಾಡುತ್ತಾ ಕೆಲಸದ ಒತ್ತಡಡಿಂದ ಹಾಸ್ಯ ರಸದೌತಣ ಜೀವನದಲ್ಲಿ ತುಂಬಾ ಕಡಿಮೆಯಾಗುತ್ತದೆ ನಗುವದರಿಂದ ಮನುಷ್ಯನ ಆರೋಗ್ಯ ಚನ್ನಾಗಿ ಇರಲಿ ಸಹಾಯಕವಾಗಿದೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಪಿಐ ಶ್ರೀಮಂತ ಇಲ್ಲಾಳ ಇವರು ಮಾತಾಡುತ್ತಾ ಕಲಾವಿದರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಇಲ್ಲವಾದರೆ ಹಲವಾರು ಕಲೆಗಳು ಅಳುವಿನ ಅಂಚಿನಲ್ಲಿ ಇವೆ ಎಂದರು.
ಪ್ರಾಸ್ತಾವಿಕವಾಗಿ ಸುನೀಲ ಮಾರುತಿ ಮಾನಪಡೆ ಅವರು ಮಾತನಾಡಿದರು ವೇದಿಕೆಯ ಮೇಲೆ ವಿಠಲ ಚಿಕಣಿ, ಸಿಪಿಐ ದತ್ತಾತ್ರೇಯ, ಸಿದ್ದಲಿಂಗ ಪಾಳ, ಮೈಲಾರಿ ದೊಡ್ಡಮನಿ, ಸಾಯಿಬಣ್ಣ ದೊಡ್ಡಮನಿ, ಕಾರ್ಯಕ್ರಮದ ನಿರೂಪಣೆ ಅಕ್ಷಿತಾ ಕುಲಕರ್ಣಿ ಮಾಡಿದರು.