ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ದೊಡ್ಡದು:ಗುಲಾಮ ಹುಸೇನ


ಸಂಜೆವಾಣಿ ವಾರ್ತೆ
ಕೊಪ್ಪಳ, ಸೆ.10: ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಶಿಕ್ಷಕರ ಕೆಲಸವಲ್ಲ.ಸರಿಯಾದ ಮಾರ್ಗದರ್ಶನ ನೀಡಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ದೊಡ್ಡದು ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ ಹೇಳಿದರು.
 ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಆಟೋಟ ಸ್ಪರ್ಧೇಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಣೆಯ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ತಂದೆ-ತಾಯಿಗಳಿಗಿಂತ ಶಿಕ್ಷಕರ ಪಾತ್ರ ಮಹತ್ವದ್ದು,ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಮಾನಸಿಕ ಸ್ಥೈರ್ಯ,ಆತ್ಮ ವಿಶ್ವಾಸ,ಸಂಸ್ಕಾರ,ತಾಳ್ಮೆ, ಜ್ಞಾನವನ್ನು ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ.ಶಿಕ್ಷಕರು ತರಗತಿಗಳಿಗೆ ತೆರಳಿ ಪಾಠ ಮಾತ್ರ ಹೇಳಿ ಬರುವುದಲ್ಲ.ಆದರ್ಶ ಶಿಕ್ಷಕರಾಗಿ ಮಕ್ಕಳನ್ನು ತಿದ್ದಬೇಕು.ಹಾಗಾಗಿ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವ|ಋದ್ದಿಯ ಬೆಳವಣಿಗೆಗೆ ದಾರಿ ರೂಪಿಸುವಂತಹ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.
 ಟಿ.ಜಿ.ಟಿ.ಶಿಕ್ಷಕರಾದ ಮೊಹಮ್ಮದ ಆಭೀದ ಹುಸೇನ ಅತ್ತಾರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ  ಮಾತನಾಡಿದರು.
 ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ,ಶಿಕ್ಷಕರಾದ ನಾಗಪ್ಪ ನರಿ,ಮಲ್ಲಿಕಾರ್ಜುನ ಹ್ಯಾಟಿ,ಭಾರತಿ ಆಡೂರು,ಶೀಲಾ ಬಂಡಿ,ಗೌಸಿಯಾಬೇಗಂ,ಕಲಿಕಾ ಟ್ರಸ್ಟ್ ನ ಶಿಕ್ಷಕಿ ಎಸ್.ಜೆ.ಬೆಲ್ಲದ,ಬಿ.ಎಡ್.ಪ್ರಶಿಕ್ಷಣಾರ್ಥಿ ಪ್ರಿತಮ ಮುಂತಾದವರು ಹಾಜರಿದ್ದರು. 

One attachment • Scanned by Gmail