
ಕಲಬುರಗಿ:ಫೆ.27: ಸಾಮಾಜಿಕ ಮತ್ತು ಸಾಂಸ್ಕøತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣವಾದಂತೆ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕøತಿಕ ಚಟುವಟಿಕೆಗಳು ಕಾರಣ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಜೇವರ್ಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀಷಣ್ಮುಖ ಶಿವಯೋಗಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಬಸವ ಚೇತನ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಬದುಕಿನ ಮೌಲ್ಯ ಅರಿಯುವಲ್ಲಿ, ಭೌಧ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕøತಿಕ ಚಟುವಟಿಕೆಗಳು ಕಾರಣವಾಗಿವೆ. ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರ ಗುರುತಿಸಿ ಬಸವ ಚೇತನ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಷಣ್ಮುಖ ಶಿವಯೋಗಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ಕಲ್ಲಾ, ಅನೀಲ ರಾಂಪೂರ ನೇತೃತ್ವ ವಹಿಸಿದ್ದರು. ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಶಿವಲಾಲ್‍ಸಿಂಗ್ ಸಮಾರಂಭವನ್ನು ಉದ್ಘಾಟಿಸಿದರು. ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಜಶೇಖರ ಸೀರಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಪಿಎಸ್‍ಐ ಶಿವರಾಜ ಪಾಟೀಲ ಆಗಮಿಸಿದ್ದರು.
ಇದೇ ವೇಳೆ ಸಾಹಿತಿ ಸದಾನಂದ ಪಾಟೀಲ, ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರ, ಬಸವಕೇಂದ್ರದ ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ಸಿದ್ದು ಸಾಹು ಅಂಗಡಿ, ಡಾ.ಮಹ್ಮದ್ ಯಾಸೀನ್, ರಾಜು ಪವಾರ, ಪ್ರಾಚಾರ್ಯರಾದ ನವೀದ್ ಅಂಜುಂ ಸಲ್ಮಾ, ಮೋಹಿನುದ್ಧಿನ್ ಇನಾಂದಾರ, ಮಹಿಬೂಬ ಪಟೇಲ, ಶರಣು ಅವರಾದ, ಅರುಣರೆಡ್ಡಿ, ರವಿಚಂದ್ರ ಗುತ್ತೇದಾರ, ಮಹಾನಂದ ಹುಗ್ಗಿ, ರಾಣೋಜಿ ಸುಬೇದಾರ, ಶರಣು ಪಾಟೀಲ, ಸಂಗಣ್ಣ ಹೂಗಾರ, ಸಿದ್ದು ಅಂಕಸದೊಡ್ಡಿ, ಸಿದ್ದು ಮಾವನೂರ ಅವರಿಗೆ ಬಸವ ಚೇತನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನಂತರ ಗಾಯಕರಾದ ಇದು ಬ್ಯಾರೆನೆ ಐತಿ ಖ್ಯಾತಿಯ ಸುರೇಶ ಇಂಚಗೇರಿ, ಭರತರಾಜ, ದೀಪಾ ಹಳಿಯಾಳ, ಕವಿತಾ ಚಲಗೇರಿ, ಕಲ್ಯಾಣಿ ಬೆಳಗಾವಿ, ಜೂ.ರವಿಚಂದ್ರ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಿತು. ಶಿಕ್ಷಕಿ ಜ್ಯೋತಿ ಅಣಕಲ್ ಪ್ರಾರ್ಥಿಸಿದರು, ಗುರುಲಿಂಗಯ್ಯಸ್ವಾಮಿ ಯನಗುಂಟಿ ಸ್ವಾಗತಿಸಿದರು, ಸಾಹಿತಿ ಶಿವಪುತ್ರಪ್ಪ ನೆಲ್ಲಗಿ ನಿರೂಪಿಸಿ ವಂದಿಸಿದರು.
ಪ್ರಮುಖರಾದ ಷಣ್ಮುಖಪ್ಪಗೌಡ ಹಿರೇಗೌಡ, ಬಾಪುಗೌಡ ಬಿರಾಳ, ಮಹಾಂತಪ್ಪ ಸಾಹು ಹರವಾಳ, ಶಿವಕುಮಾರ ಕಲ್ಲಾ, ಜಯಪ್ರಕಾಶ ಪಾಟೀಲ, ಮಲ್ಲಣಗೌಡ ಕನ್ಯಾಕೋಳೂರ, ದೌಲತ್ರಾಯ ದೇಸಾಯಿ, ಮಲ್ಲಿಕಾರ್ಜುನ ಬಿರಾದಾರ, ದೇವಿಂದ್ರ ಬನ್ನೆಟ್ಟಿ, ರಾಜು ಗುಡೂರ, ಸಿದ್ದು ಗಜ, ನವೀನ್ ಗೋಗಿಕರ್, ಅಂಬರೀಶ ಪತಂಗೆ, ಮಹಾಂತೇಶ ಹೂಗಾರ, ಮಾಳಪ್ಪ ಪೂಜಾರಿ, ಗೀತಾ ರಾಜಳ್ಳಿ, ಹೇಮಾವತಿ ಕಲ್ಲಾ, ಅಖಂಡು ಕಲ್ಲಾ, ಶರಣಪ್ಪ ಅರಳಗುಂಡಗಿ, ಧೂಳೇಶ ಪಾಟೀಲ, ಪ್ರಕಾಶಗೌಡ ಹರನೂರ, ಶ್ರೀಶೈಲಗೌಡ ಕರಕಿಹಳ್ಳಿ, ಗುರುಗೌಡ ಮಾಲಿಪಾಟೀಲ, ಚಂದನ ಮಹೇಂದ್ರಕರ್, ರವಿ ಕೋಳಕೂರ, ಭೀಮು ಕುಲಕರ್ಣಿ, ಮಲ್ಲು ಗೂಳೇದ್, ಈರಣ್ಣ ಅವರಾದ, ಬಸವರಾಜ ದೇಸಾಯಿ, ಬಸವರಾಜ ಮಡಿವಾಳಕರ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.