’ವೋ ಲಡ್ಕೀ ಹೈ ಕಹಾಂ’ ಫಿಲ್ಮ್ ನಲ್ಲಿ ಪ್ರತೀಕ್ ಗಾಂಧೀ ಮತ್ತು ತಾಪಸೀ ಪನ್ನೂ

ತಾಪಸೀ ಪನ್ನೂ ತನ್ನ ಹೊಸ ಫಿಲ್ಮ್ ವೋ ಲಡ್ಕೀ ಹೈ ಕಹಾಂ ಘೋಷಣೆ ಮಾಡಿದ್ದಾರೆ.
ಈ ಫಿಲ್ಮ್ ನಲ್ಲಿ ತಾಪಸೀ ಜೊತೆ ಮೊದಲ ಬಾರಿಗೆ ಪ್ರತೀಕ್ ಗಾಂಧೀ ಪ್ರಧಾನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಮಾಹಿತಿಯನ್ನು ತಾಪಸೀ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ .
ಈ ಫಿಲ್ಮಿನ ಫಸ್ಟ್ ಲುಕ್ ಪೋಸ್ಟರ್ ಶೇರ್ ಮಾಡುತ್ತಾ ಅದರಲ್ಲಿ ಕ್ಯಾಪ್ಟನ್ ಬರೆದಿದ್ದಾರೆ-
“ಜಂಗ್ಲೀ ಪಿಕ್ಚರ್ ಮತ್ತು ಸಿದ್ದಾರ್ಥ ರಾಯ್ ಕಪೂರ್ ಅವರ ಮುಂದಿನ ಕಾಮಿಡಿ ಡ್ರಾಮಾ ಫಿಲ್ಮ್ ವೋ ಲಡ್ಕೀ ಹೈ ಕಹಾಂ ಆಗಿದೆ. ಇದರಲ್ಲಿ ಪ್ರತೀಕ್ ಗಾಂಧಿ ಮತ್ತು ನಾನು ನಾಪತ್ತೆಯಾದ ವಧುವನ್ನು ಹುಡುಕುವ ಎಲ್ಲಾ ತಯಾರಿ ನಡೆಸಿದ್ದೇವೆ” ಎಂದು.
ಪೋಸ್ಟರ್ ನಲ್ಲಿ ತಾಪಸೀ ಪೊಲೀಸ್ ಡ್ರೆಸ್ಸಿನಲ್ಲಿ ಇದ್ದಾರೆ. ಅವರು ತಮ್ಮ ಕೈಯಲ್ಲಿ ಮ್ಯಾಪ್ ಹಿಡಿದಿದ್ದಾರೆ. ಪ್ರತೀಕ್ ಕೈಯಲ್ಲಿ ದುರ್ಬೀನು ಹಿಡಿದಿದ್ದಾರೆ. ಫಿಲ್ಮ್ ನಲ್ಲಿ ತಾಪಸೀ ಪನ್ನೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿದ್ದಾರೆ.ಹಾಗೂ ಪ್ರತೀಕ್ ಅವರ ವಧುವನ್ನು ಹುಡುಕಲು ತಯಾರಿ ನಡೆಸಿದ್ದಾರೆ. ಫಿಲ್ಮಿನ ಶೂಟಿಂಗ್ ಸದ್ಯ ಜಯ್ಪುರದಲ್ಲಿ ನಡೆಯುತ್ತಿದೆ .ಅರ್ಷದ್ ಸೈಯದ್ ಫಿಲ್ಮ್ ನ ಕಥೆ ಬರೆದಿದ್ದಾರೆ. ಇದರ ನಿರ್ದೇಶನವನ್ನೂ ಅರ್ಶದ್ ಸೈಯದ್ ಅವರೇ ಮಾಡುತ್ತಿದ್ದಾರೆ.

ಅಕ್ಷಯ್ ಕುಮಾರ್ ರ ’ಪ್ರಥ್ವೀರಾಜ್’ ಫಿಲ್ಮ್ ನ ಟೀಸರ್ ರಿಲೀಸ್

ನಟ ಅಕ್ಷಯ್ ಕುಮಾರ್ ಅವರು ಈ ದಿನಗಳಲ್ಲಿ ಬಿಡುಗಡೆಗೊಂಡಿರುವ ತನ್ನ ಫಿಲ್ಮ್ ’ಸೂರ್ಯವಂಶೀ’ ಯನ್ನು ಮುಂದಿಟ್ಟು ಸುದ್ದಿಯಲ್ಲಿದ್ದಾರೆ .ಅಕ್ಷಯ್ ಕುಮಾರ್ ಅವರು ಶೀಘ್ರವೇ ಅಪ್ ಕಮಿಂಗ್ ಫಿಲ್ಮ್ ’ಪೃಥ್ವೀರಾಜ್’ ನಲ್ಲಿ ಮತ್ತೆ ಪ್ರೇಕ್ಷಕರೆದುರು ಬರಲಿದ್ದಾರೆ.
ಈ ಫಿಲ್ಮ್ ನಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಮಿಸ್ ವರ್ಲ್ಡ್ ಮಾನುಷಿ ಛಿಲ್ಲರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.


ಮಾನುಷಿ ಪೃಥ್ವೀರಾಜ್ ಫಿಲ್ಮ್ ನ ಮೂಲಕ ಬಾಲಿವುಡ್ ಗೆ ಎಂಟ್ರಿ ಮಾಡಿದ್ದಾರೆ. ಈ ನಡುವೆ ಫಿಲ್ಮ್ ನ ಕುರಿತು ಬಹುದೊಡ್ಡ ಒಂದು ಅಪ್ಡೇಟ್ ಕಾಣಿಸಿಕೊಂಡಿದೆ. ಮೇಕರ್ಸ್ ಪೃಥ್ವೀರಾಜ್ ನ ಟೀಸರ್ ರಿಲೀಸ್ ಡೇಟ್ ನವಂಬರ್ ೧೫( ನಿನ್ನೆ) ಎಂದರು.
ಫಿಲ್ಮ್ ಸಮೀಕ್ಷಕ ತರಣ್ ಆದರ್ಶ್ ಅವರು ಪೋಸ್ಟರ್ ಶೇರ್ ಮಾಡಿದಂತೆ- ಈ ಫಿಲ್ಮ್ ’ಪೃಥ್ವಿರಾಜ್’ ಅಕ್ಷಯಕುಮಾರ್ ರ ಮುಂದಿನ ಬಹುದೊಡ್ಡ ರಿಲೀಸ್ ಆಗಲಿದೆ. ಇದರ ಟೀಸರ್ ನವಂಬರ್ ೧೫ರಂದು ಬಿಡುಗಡೆಗೊಂಡಿದೆ ಎಂದಿದ್ದಾರೆ . ಪ್ರಥ್ವೀರಾಜ್ ನಲ್ಲಿ ಅಕ್ಷಯ್ ಮತ್ತು ಮಾನುಷಿ ಛಿಲ್ಲರ್ ಹೊರತಾಗಿ ಸಂಜಯದತ್ತ್, ಸೋನೂ ಸೂದ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶನ ಮಾಡಿದವರು ಡಾಕ್ಟರ್ ಚಂದ್ರಪ್ರಕಾಶ್ ದ್ವಿವೇದಿ. ಈ ಫಿಲ್ಮ್ ನಲ್ಲಿ ಅಕ್ಷಯಕುಮಾರ್ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿದ್ದಾರೆ.

ಚಿರಂಜೀವಿ ಅವರ ’ಗಾಡ್ ಫಾದರ್’ ಫಿಲ್ಮ್ ನಲ್ಲಿ ಪ್ರಮುಖ ಪಾತ್ರದಲ್ಲಿ ಸಲ್ಮಾನ್ ಖಾನ್

ಕೆಲವು ದಿನಗಳ ಮೊದಲು ಒಂದು ಸುದ್ದಿ ಬಾಲಿವುಡ್ ನಲ್ಲಿ ಪ್ರಚಾರವಾಯಿತು -ದಕ್ಷಿಣದ ಸೂಪರ್ ಸ್ಟಾರ್ ಚಿರಂಜೀವಿ ಅವರ ತೆಲುಗು ಫಿಲ್ಮ್ ಗಾಡ್‌ಫಾದರ್ ನಲ್ಲಿ ಸಲ್ಮಾನ್ ಖಾನ್ ಅಭಿನಯಿಸಲಿದ್ದಾರೆ ಎಂದು.
ಈ ಫಿಲ್ಮ್ ನ ಮ್ಯೂಸಿಕ್ ಎಸ್ ಥಮನ್ ಕಂಪೋಸ್ ಮಾಡುತ್ತಿದ್ದಾರೆ .ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಥಮನ್ ಅವರು ಈ ಫಿಲ್ಮ್ ನಲ್ಲಿ ಸಲ್ಮಾನ್ ಖಾನ್ ಅವರ ಪಾತ್ರವೂ ಇದೆ ಎಂದು ಪುಷ್ಟೀಕರಿಸಿದ್ದಾರೆ .


ಫಿಲ್ಮ್ ನಲ್ಲಿ ಸಲ್ಮಾನ್ ಮತ್ತು ಚಿರಂಜೀವಿ ಜೊತೆಯಾಗಿ ನೃತ್ಯ ಮಾಡುವರು. ಬಾಲಿವುಡ್ ಸಿಂಗರ್ ಬ್ರಿಟನೀ ಸ್ಪಿಯರ್ಸ್ ಕೂಡಾ ಇದರಲ್ಲಿ ಸೇರಿಕೊಂಡಿದ್ದಾರೆ. ಫಿಲ್ಮಿನ ಹಾಡಿಗೆ ಅವರು ತಮ್ಮ ಸ್ವರವನ್ನು ನೀಡಲಿದ್ದಾರೆ .
ಈ ವರ್ಷದ ಅಂತ್ಯದೊಳಗೆ ಅಧಿಕೃತ ಘೋಷಣೆಯಾಗಲಿದೆ. ಗಾಡ್‌ಫಾದರ್ ಹಿಟ್ಟ್ ಮಲಯಾಳಂ ಫಿಲ್ಮ್ ’ಲೂಸಿಫರ್’ ಇದರ ತೆಲುಗು ರಿಮೇಕ್ ಆಗಿದೆ. ಮೇಕರ್ಸ್ ಚಿರಂಜೀವಿಯ ಹೊರತಾಗಿ ಇತರ ಕಲಾವಿದರ ಹೆಸರನ್ನು ಘೋಷಿಸಿಲ್ಲ. ಮಂಜು ವಾರಿಯರ್ ಮತ್ತು ವಿವೇಕ್ ಒಬೆರಾಯ್ ಕೂಡಾ ಇದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಲಿರುವರು ಎನ್ನಲಾಗಿದೆ.

’ಸತ್ಯಮೇವ ಜಯತೆ ೨’ ಫಿಲ್ಮ್ ನ ನಂತರ ಮುಕೇಶ್ ಭಟ್ಟ್ ಅವರ ಫಿಲ್ಮ್ ನಲ್ಲಿ ಮತ್ತೊಮ್ಮೆ ಜೊತೆಯಾಗಲಿದ್ದಾರೆ ಜಾನ್ ಮತ್ತು ದಿವ್ಯಾ

ಸತ್ಯಮೇವ ಜಯತೆ ೨ ಇದನ್ನು ಮುಂದಿಟ್ಟು ಜಾನ್ ಅಬ್ರಾಹಮ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಈ ಫಿಲ್ಮ್ ನಲ್ಲಿ ಇವರ ಜೊತೆ ಅಭಿನಯಿಸಿದವರು ದಿವ್ಯಾ ಖೋಸ್ಲಾ ಕುಮಾರ್.


ಕೆಲ ವಾರಗಳ ಮೊದಲೇ ಈ ಫಿಲ್ಮ್ ನ ಟ್ರೈಲರ್ ರಿಲೀಸ್ ಆಗಿತ್ತು. ಟ್ರೈಲರ್ ನಲ್ಲಿ ಜಾನ್ ಜೊತೆಗೆ ದಿವ್ಯಾ ಕೋಸ್ಲಾ ಅವರು ಭರ್ಜರಿ ಆ?ಯಕ್ಷನ್ ನೀಡಿದ್ದಾರೆ. ಈಗ ಬಂದಿರುವ ವರದಿಯಂತೆ ಸತ್ಯಮೇವ ಜಯತೆ ೨ ನಂತರ ಜಾನ್ ಮತ್ತು ದಿವ್ಯಾ ಕೋಸ್ಲಾ ಜೋಡಿ ಫಿಲ್ಮ್ ಮೇಕರ್ ಮುಕೇಶ್ ಭಟ್ಟ್ ಅವರ ಮುಂದಿನ ಫಿಲ್ಮ್ ನಲ್ಲಿ ಮತ್ತೆ ಕಂಡು ಬರಲಿದ್ದಾರೆ.
ಮುಕೇಶ್ ಭಟ್ಟ್ ಅವರು ಈ ತನಕ ಫಿಲ್ಮ್ ನ ಕುರಿತು ಫೈನಲ್ ಆಗಿಲ್ಲ ಎಂದಿದ್ದಾರೆ.ಫಿಲ್ಮ್ ನ ತಾರಾಗಣದ ಆಯ್ಕೆ ನಡೆಯುತ್ತಿದೆ .ಸದ್ಯ ಸ್ಕ್ರಿಪ್ಟ್ ನ ಕೆಲಸ ಮುಂದುವರಿದಿದೆ.