ವೈ.ಎಸ್.ವಿ ದತ್ತಾ ವಿರುದ್ಧ ೪೧ ಚೆಕ್‌ಬೌನ್ಸ್ ಪ್ರಕರಣ

ಚಿಕ್ಕಮಗಳೂರು,ಏ.೨೦:ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೈ.ಎಸ್.ವಿ ದತ್ತಾ ವಿರುದ್ಧ ೪೧ ಚೆಕ್‌ಬೌನ್ಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಚೆಕ್‌ಬೌನ್ಸ್ ಪ್ರಕರಣಗಳು ದಾಖಲಾಗಿವೆ.
ದತ್ತಾ ನೀಡಿರುವ ಚೆಕ್ ನಗದಾಗಿಲ್ಲ, ಹೀಗಾಗಿ, ಈ ಎಲ್ಲ ಪ್ರಕರಣಗಳು ನೆಗೋಷಿಯಬಲ್ ಇನ್ಸುಟ್ರುಮೆಂಟ್ಸ್ ಕಾಯ್ದೆಯ ೧೮೮೧ ಕಲಂನ ೧೩೮ರಡಿಯಲ್ಲಿ ದಾಖಲಾಗಿವೆ. ೨೦೧೪ ರಿಂದ ೨೦೨೦ರಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿವೆ. ಬೆಂಗಳೂರಿನ ಎಸಿಎಂಎಂ ಕೋರ್ಟ್‌ನಲ್ಲಿ ೬ ಪ್ರಕರಣ ದಾಖಲಾಗಿವೆ. ಎಸಿಎಂಎಂ ನ್ಯಾಯಾಲಯದಲ್ಲಿ ೧೨,೧೫,೧೮,೧೯,೨೩,೨೬ ಹಾಗೂ ೩೬ನೇ ನ್ಯಾಯಾಲಯಗಳಲ್ಲಿ ತಲಾ ೧ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.
ಬೆಂಗಳೂರಿನ ಎಸಿಎಂಎಂ ೨೨ನೇ ನ್ಯಾಯಾಲಯದಲ್ಲಿ ೩, ೪೨ನೇ ನ್ಯಾಯಾಲಯದಲ್ಲಿ ೬ ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಿನ ಎಸ್‌ಸಿಸಿಹೆಚ್‌ನ ೬ ಮತ್ತು ೮ನೇ ನ್ಯಾಯಾಲಯಗಳಲ್ಲಿ ತಲಾ ಒಂದು ಪ್ರಕರಣ, ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ೫,ಅಥಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ೨, ಹಾಸನ ನ್ಯಾಯಾಲಯದಲ್ಲಿ ೨, ಬೇಲೂರು, ಹುಬ್ಬಳ್ಳಿ, ಗದಗ ಕೋರ್ಟ್‌ಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಅದೇ ರೀತಿ ಅನಂತಪುರ ನ್ಯಾಯಾಲಯದಲ್ಲಿ ೧, ಗುಂತಕಲ್ ನ್ಯಾಯಾಲಯಲ್ಲಿ ೩ ಪ್ರಕರಣಗಳು ದಾಖಲಾಗಿವೆ.
ನಾಮಪತ್ರ ಸಲ್ಲಿಕೆ ವೇಳೆ ದತ್ತಾ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ೨೦೨೨-೨೩ನೇ ಸಾಲಿನಲ್ಲಿ ಅವರ ವಾರ್ಷಿಕ ಆದಾಯ ೮.೧ ಲಕ್ಷ ರೂ. ಇತ್ತು, ೧೭.೮೯ ಲಕ್ಷ ಮೌಲ್ಯದ ಚಿರಾಸ್ಥಿ, ೨.೯೪ ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ೯೩.೧೯ ಲಕ್ಷ ಸಾಲ ಇದೆ ಎಂದು ಉಲ್ಲೇಖಿಸಿದ್ದಾರೆ.