ವೈಸ್ ವ್ಯೂಮನ್ಸ್ ಕ್ಲಬ್ ವತಿಯಿಂದ ರಾಧಾಕೃಷ್ಣನ ಜಯಂತಿ ಆಚರಣೆ

ಕಲಬುರಗಿ,ಸೆ.8-ವೈಸ್ ವ್ಯೂಮನ್ಸ್ ಕ್ಲಬ್À ವತಿಯಿಂದ ಇತ್ತೀಚೆಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕಿ ಶಕುಂತಲಾ ಪೆÇದ್ದರವರು ಸೆಪ್ಟೆಂಬರ್ 5 ರಂದು ರಾಧಾಕೃಷ್ಣನವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶಿಕ್ಷಣ ಕಲಿಸಿದ ಗುರುವಿನ ಸ್ಥಾನ ಮಹತ್ತರ. ಜೀವನದಲ್ಲಿ ನಾವೂ ಏನಾದರೂ ಸಾಧಿಸಬೇಕಾದರೆ ಹಿಂದೆ ಗುರು ಮುಂದೆ ಗುರು ಇರಬೇಕು ಎಂದು ಹೇಳಿದರು.
ರಾಧಾಕೃಷ್ಣನವರು ತಮ್ಮ ಜೀವನದುದ್ದಕ್ಕೂ ಓದಿನ ಕುರಿತು ಆಸಕ್ತಿ ಬೆಳೆಸಿ, ವಿದ್ಯಾಭ್ಯಾಸ ಪಡೆಯುವಂತೆ ಪ್ರೇರೇಪಿಸಿದವರು. ಅವರೆಲ್ಲ ಮಾರ್ಗದರ್ಶನ ನಮಗೆಲ್ಲ ಸ್ಫೂರ್ತಿದಾಯಕ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಶಕುಂತಲಾ ಪೆÇದ್ದರ್, ಸಿಂಧು ಕಾಗರ್ಕರ್, ಪ್ರಭಾ ಶೆಟ್ಡಿ, ಶರಣಮ್ಮ ಕೋಲಕುರು, ಚಂದ್ರಕಲಾ ವಾಂಜರಖೇಡ, ಶಿವಲೀಲಾ ಕಲಗುರ್ಕಿ, ಡಾ.ಗಂಗಾ ಪೂಜಾರ್, ಅನಂತಮ್ಮ ಕಾಂಬ್ಳಿ ಹಾಗೂ ಮಾನಂದ ಬಿಲಗುಂದಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೈಸ್ ವ್ಯೂಮನ್ಸ್ ಕ್ಲಬ್ ನ ಸಂಸ್ಥಾಪಕಿ ಸುನಂದಾ ಮಮ್ಮುಡಿ, ಅಧ್ಯಕ್ಷೆ ಉಮಾ ಗಚ್ಚಿನಮನಿ, ಕಾರ್ಯದರ್ಶಿ ಶಾಂತಾ ಪಸ್ತಾಪೂರ, ಖಜಾಂಚಿ ಸಾವಿತ್ರಿ ಚೌಕಾ ಸದಸ್ಯರಾದ ವಿಜಯಲಕ್ಷ್ಮೀ ಕೋಸಗಿ, ಅಕ್ಕಮ್ಮ ಗುರುಗುಂಟಿ, ಶಕುಂತಲಾ ಪಾಟೀಲ್ ಉಪಸ್ಥಿತಿರಿದ್ದರು.