ವೈಷ್ಣವಿಗೆ ಅಕಾಡೆಮಿ ಬಾಲ ಗೌರವ ಪ್ರಶಸ್ತಿ

ರಾಯಚೂರು,ಮಾ.೨೮- ನಗರದ ಬಾಲ ಪ್ರತಿಭೆ ವೈಷ್ಣವಿ ದೇಶಪಾಂಡೆಗೆ ಸಂಗೀತ ಕ್ಷೇತ್ರದಲ್ಲಿನ ಅಪಾರ ಸಾಧನೆಯನ್ನು ಗುರುತಿಸಿ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕರ್ನಾಟಕ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ವತಿಯಿಂದ ದಿ.೨೭/೦೩/೨೦೨೩ ರಂದು ಧಾರವಾಡದಲ್ಲಿ ನಡೆದ ಬಾಲ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಗರದ ಬಾಲ ಪ್ರತಿಭೆ ಕುಮಾರಿ ವೈಷ್ಣವಿ ದೇಶಪಾಂಡೆ ಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.
ಘನ ಉಪಸ್ಥಿತಿಯನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ,ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರು ಶ್ರೀ ಆಚಾರ ಹಾಲಪ್ಪ ಬಸಪ್ಪ , ಶ್ರೀ ಗುರುದತ್ತ ಹೆಗಡೆ ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ, ಶ್ರೀ ಲೋಕೇಶ್ ಜಗಲಾಸರ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಧಾರವಾಡ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ನವೀನ್ ಸವನೂರು ಧಾರವಾಡ ವಹಿಸಿಕೊಂಡಿದ್ದರು.