ವೈಶಂಪಾಯನ ಸರೋವರದಲ್ಲಿ ನಾಟಕ ಪ್ರಯೋಗ

ತುಮಕೂರು, ನ. ೧೦- ಕಾವ್ಯೇಷು ನಾಟಕಂ ರಮ್ಯಂ? ಎಂಬ ಮಾತಿನಂತೆ ಸಾಹಿತ್ಯ ಪ್ರಕಾರದಲ್ಲಿ ನಾಟಕವೇ ಹೆಚ್ಚು ರಮ್ಯವಾದದ್ದು. ಆದ್ದರಿಂದ ವೈಭವದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಟಕವನ್ನು ಪ್ರಯೋಗಿಸಿ ಅದನ್ನು ಹೆಚ್ಚು ಅರ್ಥಪೂರ್ಣಗೊಳಿಸುವಲ್ಲಿ ನಮದೊಂದು ಪುಟ್ಟ ಪ್ರಯತ್ನ ಎಂದು ನಾಟಕದ ನಿರ್ದೇಶಕ ಮೆಳೇಹಳ್ಳಿ ದೇವರಾಜು ಅಭಿಪ್ರಾಯಪಟ್ಟರು.
ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವು ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಆಯೋಜಿಸಿದ್ದ “ವೈಶಂಪಾಯನ ಸರೋವರದಲ್ಲಿ? ನಾಟಕದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಣದ ವೈರಿಯನ್ನು ಮೊದಲು ಗೆಲ್ಲಬೇಕು. ನಂತರ ಕಾಣುವ ಸಂಕಷ್ಟಗಳ ವಿರುದ್ಧ ಹೋರಾಡೋಣ. ಆದ್ದರಿಂದ ಕೋವಿಡ್ ನಿಯಮಗಳನ್ನು ಅನುಸರಿಸಿ ನೀವು ಉಳಿಯಿರಿ ನಿಮ್ಮವರನ್ನು ಉಳಿಸಿಕೊಳ್ಳಿ ಎಂಬ ಸಂದೇಶವನ್ನು ನಾಟಕ ವ್ಯಕ್ತಪಡಿಸಿತು.
ರಂಗದಲ್ಲಿ ಮಹಾಂತೇಶ್ ಗೋಲಬಾವಿ, ಸಂತೋಷ್ ವಿಜಯಪುರ, ಹಿರಣ್ಯ ವಿಜಯಪುರ, ಭರತ್.ಎನ್, ಸ್ನೇಹ.ಎನ್, ತನುಜ.ಎನ್, ಪಲ್ಲವಿ.ಕೆ.ಎಸ್, ಚಿನ್ಮಯ.ಕೆ.ಪಿ, ಲಯ.ಎಂ.ಡಿ, ಸೃಷ್ಠಿ.ಎಂ.ಡಿ, ಧೃವಪ್ರಕಾಶ್ ಮನೋಜ್ಞವಾಗಿ ಅಭಿನಯಿಸಿದರು. ನಾಟಕಕ್ಕೆ ರೇಖಾದೇವರಾಜ್ ವಸ್ತ್ರವಿನ್ಯಾಸ, ಪ್ರಕಾಶ್ ಬೆಳಕು ವಿನ್ಯಾಸ, ಅನಿತಾಪ್ರಕಾಶ್ ಪ್ರಸಾದನ, ಉಮೇಶ್ ರಂಗಸಜ್ಜಿಕೆ ಮೆರುಗು ನೀಡಿದವು.