ವೈರಾಗಿ ಹನುಮಾನ ಮಂದಿರ: ಏ.3 ರಿಂದ ಅಖಂಡ 72 ತಾಸು ಮಹಾರುದ್ರಾಭಿಷೇಕ್

ಹುಮನಾಬಾದ್:ಮಾ.29: ಹನುಮಾನ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಇರುವ ವೈರಾಗಿ ಹನುಮಾನ ಮಂದಿರದಲ್ಲಿ ಏಪ್ರೀಲ್ 3 ರಿಂದ 6ರ ವರೆಗೆ ಸತತ 72 ತಾಸು ಹನುಮಾನ ಅಖಂಡ ಮಹಾರುದ್ರಾಭಿಷೇಕ್, ಗಣ ಹೂಮ ಹಾಗೂ ಸಂಗೀತ ಶಿವ ರುದ್ರ ಹೂಮ ಕಾರ್ಯಕ್ರಮ ಹಮ್ಮಿಕೊಳ್ಳಲಾದೆ ಎಂದು ಆಗ್ರೋ ಏಜೆನ್ಸಿ ಮಾಲಿಕ ಕರಬಸಯ್ಯಾ ಸ್ವಾಮಿ ಹುಡಗಿ ಮಾಹಿತಿ ನೀಡಿದ್ದಾರೆ.
ಪಟ್ಟಣದ ಹೊರವಲಯದ ಬೈರಾಗಿ ಮಠ ಹನುಮಾನ ದೇವಸ್ಥಾನ ಆವರಣದಲ್ಲಿ ಸೋಮವಾರ ಕೆ.ಬಿ ಸ್ವಾಮಿ ಆಗ್ರೋ ಏಜೆನ್ಸಿ ಹಾಗೂ ಬೈರಾಗಿ ಮಠ ಹನುಮಾನ ದೇವಸ್ಥಾನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಏಪ್ರೀಲ್ 3 ರಂದು ಬೆಳಿಗ್ಗೆ 6ಕ್ಕೆ ಗಂಗಾಸ್ನಾನ, ಕಲಶ ಪೂಜಾ, ಸಂಕಲ್ಪ, ಸಂಗೀತ ರುದ್ರಾಭಿಷೇಕ, ನವಗ್ರಹ, ಪಂಚ ಕಲಶ, ಸೃಷ್ಠಿ ಪುನ್ಯವಾಚನ ಸೇರಿದಂತೆ ವಿವಿಧ ತರಹದ ಪೂಜೆಗಳು ಜರುಗಲಿದೆ. ಏಪ್ರೀಲ್ 6 ರಂದು ಬೆಳಿಗ್ಗೆ ಗಣ ಹೂಮ, ಶಿವ ರುದ್ರ ಹೂಮ ಹಾಗೂ ಶಿವ ಪಾರ್ವತಿ ಕಲ್ಯಾಣ ಉತ್ಸವ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಪೂಜಾ ಕಾರ್ಯಕ್ರಮವನ್ನು ಉಜೈನಿ, ಕಾಶಿ, ಬೆಂಗಳೂರು ಸೇರಿದಂತೆ ವಿವಿಧಡೆ ಪ್ರತಿಷ್ಠಿತ ಪಂಡಿತರು ಬಂದು ನೆರವೇರಿಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇವಸ್ಥಾನ ಅಧ್ಯಕ್ಷ ದೇವಾನಂದ ಘವಳಕರ ಮಾತನಾಡಿ. 16ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸ ಮಹಾರಾಜರು ಸ್ಥಾಪಿಸಿದ ಬೈರಾಗಿ ಮಠ ಹನುಮನಾ ದೇವಸ್ಥಾನ ಭಕ್ತರ ಬೇಡಿದ ವರ ನೀಡುವ ದೇವಸ್ಥಾನ ಇದಾಗಿದ್ದು, ತಿಂಗಳಲ್ಲಿ ಒಮ್ಮೆಯಾದರ ಇಲ್ಲಿ ವಿವಿಧ ರೀತಿಯ ಪವಾಡುಗಳು ನಡೆಯುತ್ತಲೆ ಇರುತ್ತದೆ. ಎಂದರು.
ಇತಹ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಮಹಾ ರುದ್ರಾಭಿಷೇಕ ಪೂಜೆಯಲ್ಲಿ ಯಾರಬೇಕಾದು ಕುಳಿತು ಕೊಳ್ಳುವ ಮೂಲಕ ಹನುಮಂತನ ಕೃಪಾಶಿರ್ವಾದಕ್ಕೆ ಪ್ರಾತ್ರರಾಗಬೇಕು ಎಂದು ಭಕ್ತಾದಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೂಜೆಯಲ್ಲಿ ಭಾಗವಹಿಸುವವರು ಕಡ್ಡಾಯ ಲುಂಗಿ ಹಾಗೂ ಟಾವೇಲ್ ತರತಕ್ಕದು ಎಂದು ಮಾಹಿತಿ ನೀಡಿದ ಅವರು ದೇವಸ್ಥಾನಕ್ಕೆ ಆಗಮಿಸುವ ಸಕಲ ಭಕ್ತರಿಗೆ ಮದ್ಯಾಹ್ನ 12 ರ ಬಳಿಕ ಮಹಾ ಪ್ರಸಾದ ವ್ಯವಸ್ಥೆ ದೇವಸ್ಥಾನ ವತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೈರಾಗಿ ಮಠ ದೇವಸ್ಥಾನ ಉಪಾಧ್ಯಕ್ಷ ಚಂದ್ರಕಾತ ನಿಶಾನದಾರ, ಕಾರ್ಯದರ್ಶಿ ವೆಂಕಟೇಶ ಜಾಧವ ಸೇರಿದಂತೆ ಅನೇಕರಿದ್ದರು.