ವೈರಸ್ ಸೊಂಕಿತರ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

 ಹರಿಹರ ಮೇ 27 ;  ವೈರಸ್ ನಿಯಂತ್ರಣ ಆಗಬೇಕಾದರೆ  ಆಸ್ಪತ್ರೆಯಲ್ಲಿ ದಾಖಲಾದ ಸೊಂಕಿತರ ಜತೆಗೆ ಮನೆಯವರು ಸಂಪರ್ಕದಿಂದ ದೂರ ಇರಬೇಕು ಎಂದು ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮನಾಯ್ಕ್ ಹೇಳಿದರು ವೈರಸ್ ಸೋಂಕಿನಿಂದ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗಳನ್ನು ನೋಡಲು ಸಂಬಂಧಿಕರು ಕುಟುಂಬದವರು ಗುಂಪುಗುಂಪಾಗಿ ಬರುವುದರಿಂದ ವೈರಸ್ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುವುದಿಲ್ಲ ಆದ್ದರಿಂದ ಸಾರ್ವಜನಿಕ ಸೋಂಕಿತರು ದಾಖಲಾದ ವಾರ್ಡಗಳಿಗೆ ಹೋಗಬಾರದು ಎಂದು ಆಸ್ಪತ್ರೆಗೆ ಬರುವಂತಹ ನಾಗರಿಕರಿಗೆ ಜಾಗೃತಿ ತಿಳಿ ಹೇಳುವ ಕಾರ್ಯಕ್ಕೆ ಮುಂದಾದರು 
ಪ್ರತಿದಿನ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ  ವೈದ್ಯರು ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಪ್ರೀತಿ ವಿಶ್ವಾಸದಿಂದ ಬೆರೆತು ತಮ್ಮ ಸಂಬಂಧಿಕರಿಗೆ ಕುಟುಂಬದವರಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಮುಂದಾಗಬೇಕು ಸೋಂಕಿತರು ದಾಖಲಾದ  ವಾರ್ಡಗಳಿಗೆ ಸಾರ್ವಜನಿಕರ ಪದೇಪದೆ ಹೋದರೆ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ  ಹರಡುತ್ತದೆ ಎಂದರು. ಈ ವೇಳೆಪ್ರೊಬೇಶನರಿ ಪಿಎಸೈ ಸಿದ್ದಣ್ಣ .ಹಿರಿಯ ಆರೋಗ್ಯ ಸಹಾಯಕ ಉಮ್ಲಾನಾಯ್ಕ .ತುರ್ತು ಆಂಬ್ಯುಲೆನ್ಸ್ ವಾಹನ ಚಾಲಕ ವಸಂತ್ ಸಾಲು ಕಟ್ಟಿ .ಸಮಾಜಿಕ  ಕಾರ್ಯಕರ್ತರಾದ ನಾಗರಾಜ್ ಗೌಡ. ಎನ್ ಈ ಸುರೇಶ್ ಸ್ವಾಮಿ .ಸಂತೋಷ್ .ಸ್ವಯಂ ಸೇವಕರು ಇದ್ದರು