ವೈರಸ್ ಮೂಲ ಪತ್ತೆಗೆ ಬೈಡೆನ್ ಗಡುವು

ವಾಷಿಂಗ್ಟನ್, ಮೇ ೨೭- ಕೋರೋನಾ ಸೋಂಕಿನ ಮೂಲವನ್ನು ಪತ್ತೆ ಹಚ್ಚಿ ೯೦ ದಿನಗಳ ಒಳಗಾಗಿ ವರದಿ ನೀಡುವಂತೆ ಗುಪ್ತಚರ ಸಂಸ್ಥೆಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೂಚನೆ ನೀಡಿದ್ದಾರೆ.
೨೦೧೯ರ ನವಂಬರ್ ನಲ್ಲಿ ಚೀನಾದ ವುಹಾನ್ ವೈರಾಣು ಪ್ರಯೋಗಾಲದಿಂದ ಕೊರೊನಾಸೋಂಕು ಜಗತ್ತಿನಲ್ಲೆಡೆ ಹರಡಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಜೋ ಬೈಡೆನ್ ಈ ಸೂಚಿಸಿದ್ದಾರೆ.
ಕೊರೊನಾ ಸೋಂಕಿನ ಉಗಮ ಮತ್ತು ಅದರ ಮೂಲ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ೯೦ ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅವರು ನಿರ್ದೇಶಿಸಿದ್ದಾರೆ.
ಕೊರೋನೋ ಸೋಂಕಿನ ಮೂಲ ಪತ್ತೆಹಚ್ಚುವ ಸಂಬಂಧ ಎಲ್ಲೆಡೆ ಆಗ್ರಹ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಗುಪ್ತಚರ ಸಂಸ್ಥೆಗಳು ವರದಿ ನೀಡಿದ ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಗುಪ್ತಚರ ಸಂಸ್ಥೆಗಳು ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಂಡು ಮೂಲವನ್ನು ಪತ್ತೆ ಹಚ್ಚಿ ನಮ್ಮ ಬೆಂಬಲ ಸಹಕಾರ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ವಿಫಲ: ಕೊರೊನಾ ಸೋಂಕಿನ ಮೂಲಗಳನ್ನು ಪತ್ತೆ ಹಚ್ಚಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳಿಗೆ ಈ ಕೆಲವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸೂಲಿವಾನ್ ಅವರಿಗೆ ಈ ಸಂಬಂಧ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ ಜೋ ಬೈಡೆನ್ ಅವರು, ಈಗ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳಿಗೆ ೯೦ ದಿನಗಳ ಒಳಗಾಗಿ ಮೂಲವನ್ನು ಪತ್ತೆ ಹಚ್ಚಿ ಸಂಪೂರ್ಣ ಆಗುವ ನಿಖರ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಕೊರೋನಾ ಸೋಂಕು ಪ್ರಯೋಗಾಲಯದಿಂದ ಉತ್ಪತ್ತಿಯಾಗಿ ರುವುದೇ ಅಥವಾ ಮಾನವನ ದುರುದ್ದೇಶದಿಂದ ಉತ್ಪತ್ತಿಯಾಗಿದೆ ಎನ್ನುವುದು ಸೇರಿದಂತೆ ಅದರ ಮೂಲವನ್ನು ನಿಖರವಾಗಿ ಪತ್ತೆ ಹಚ್ಚಿ ಮಾಹಿತಿ ನೀಡಬೇಕು ಎಂದು ಕೂಡ ಅವರು ನಿರ್ದೇಶನ ನೀಡಿದ್ದಾರೆ