ವೈರಸ್ ನಿಂದ ಮೃತಪಟ್ಟ ವ್ಯಕ್ತಿಗೆ ಹೆಗಲು ಕೊಟ್ಟ ಸ್ವಯಂ ಸೇವಕರು

ಹರಿಹರ.ಜೂ.6;  ಕೋವಿಡ್ ಗೆ ಬಲಿಯಾದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು  ರಾಷ್ಟ್ರೀಯ ಸ್ವಯಂ ಸೇವಕರು  ಗೌರವಯುತವಾಗಿ ನೆರವೇರಿಸಿದ್ದಾರೆ.ಜಗತ್ತನ್ನೇ ತಲ್ಲಣಗೊಳಿಸಿದ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿರುವ  ವೈರಸ್ ನಿಂದ ಮೃತಪಟ್ಟವರಿಗೆ ಕುಟುಂಬದವರು ಅಂತ್ಯ ಸಂಸ್ಕಾರವನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡುವುದಕ್ಕೆ ನಾವು ಬರುತ್ತೇವೆ ಎಂದು ಸ್ವಯಂ ಸೇವಕರ ತಂಡ ರುದ್ರಭೂಮಿಗೆ ತೆರಳಿ ವೈರಸ್ ಗೆ ಬಲಿಯಾದ ವ್ಯಕ್ತಿಯನ್ನು ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ ಇಂತಹ ಒಳ್ಳೆ ಕಾರ್ಯಕ್ಕೆ ಮುಂದಾಗಿರುವುದು ಹರಿಹರ ನಗರದ ಹೆಮ್ಮೆಯ ರಾಷ್ಟ್ರೀಯ ಸ್ವಯಂ ಸೇವಕರ ತಂಡ ಪ್ರತಿನಿತ್ಯವೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ 19 ವಾರ್ಡುಗಳಲ್ಲಿ ದಾಖಲಾದ ವ್ಯಕ್ತಿಗಳಿಗೆ ಮತ್ತು ಅವರ ಜೊತೆಗಿರುವ ಸಂಬಂಧಿಕರಿಗೆ ಊಟ ಉಪಚಾರ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವುದು ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಸೊಂಕಿತರ ಸಂಬಂಧಿಕರಿಗೆ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡುವುದು,ವ್ಯಾಕ್ಸಿನ್ ಲಸಿಕೆಗಳ ಹಾಕುವುದರಲ್ಲಿ ಜನರ ನೂಕುನುಗ್ಗಲು ಸಂದರ್ಭದಲ್ಲಿ ಅವರಿಗೆ ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ಪ್ರತಿಯೊಬ್ಬರಿಗೂ ಲಸಿಕೆಯ ಸಿಗುವುದಕ್ಕೆ ಅನುಕೂಲ ಮಾಡುವುದು ಇತರ ಹತ್ತು ಹಲವಾರು ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಸಹಕಾರ ಮಾಡುವುದಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮೃತಪಟ್ಟವರು ಯಾವುದೇ ಜಾತಿ ಧರ್ಮಕ್ಕೆ ಸೇರಿರಲಿ ಜಾತಿ ಭೇದ ಮರೆತು ಯಾರ ಭಾವನೆಗಳಿಗೂ ಧಕ್ಕೆ ಬರದಂತೆ ಅಂತ್ಯಕ್ರಿಯೆ ಮಾಡೋದಕ್ಕೆ ಮುಂದಾಗಿದ್ದೇವೆ  ಜೀವಂತವಾಗಿ ಇರುವವರೆಗೂ ಒಳ್ಳೆಯ ಧರ್ಮದ ಕಾರ್ಯವನ್ನು ಮಾಡೋಣ ಇತರರಿಗೆ ಸಹಾಯ ಮಾಡುವುದನ್ನು ಕಲಿಯೋಣ ಅಂತ ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮಾನವೀಯತೆ ಮೆರೆಯೋಣ ನೊಂದವರಿಗೆ ನೆರವಾಗುವ ಎಂದು ಕಿರಣ್ ಬೊಂಗಾಳೆ. ಪ್ರಕಾಶ್ ದೇಶಪಾಂಡೆ. ಚೇತನ್. ಪ್ರಶಾಂತ್ .ಗಣೇಶ್. ವಿಶಾಲ್. ಮಾರುತಿ ಶೆಟ್ಟಿ .ವಿರೇಶ್ .ಪ್ರಭಾಕರ್ .ಮತ್ತು ಶಾಂತರಾಜ್ .ರಾಷ್ಟ್ರೀಯ ಸ್ವಯಂ ಸೇವಕರ ತಂಡ ದವರು ಹೇಳಿದರುವೈರಸ್ ಎಂದರೆ ಸಾಕು ದೂರ ಉಳಿಯುವ ಜನರ ಜನರ ಮಧ್ಯೆ  ರಾಷ್ಟ್ರೀಯ ಸ್ವಯಂ ಸೇವಕರು ಸಕ್ರಿಯವಾಗಿ ಮಾನವೀಯತೆ ಮೆರೆಯುವಂಥ ಕಾರ್ಯಗಳನ್ನು ಮಾಡುತ್ತಿದ್ದರೆ ಈವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಾಲ್ಲೂಕು ಆಡಳಿತ ಆಸ್ಪತ್ರೆಯ ವೈದ್ಯಾಧಿಕಾರಿಗಳು   ಸುರಕ್ಷತೆ ರಕ್ಷಣೆಯ ಸಾಮಗ್ರಿಗಳನ್ನು ನೀಡುವುದರ ಜತೆಗೆ ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕೆ ಅಧಿಕಾರಿಗಳು ಗಮನ ವಹಿಸಬೇಕು  ಪುಣ್ಯದ ಕೆಲಸ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಸ್ವಯಂ ಸೇವಕರ ಕೃತಜ್ಞತೆಗಳನ್ನು ಸಲ್ಲಿಸಿದರು.