ವೈರಸ್ ತಡೆಯಲು ರಾಸಾಯನಿಕ ಔಷಧಿ ಸಿಂಪಡಣೆಗೆ ಕ್ರಮ

ಜಗಳೂರು.ಮೇ.೧೮; ಜಗಳೂರು ಪಟ್ಟಣದಲ್ಲಿ ಕೋವಿಡ್ -19  ಕೋರೋನ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ  ಆದ್ದರಿಂದ ಪಟ್ಟಣದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಆದ್ದರಿಂದ ಪಟ್ಟಣ ಪಂಚಾಯಿತಿ ಹಾಗೂ ಅಗ್ನಿಶಾಮಕ ಠಾಣೆಯ ವತಿಯಿಂದ ಪಟ್ಟಣದ 18 ವಾರ್ಡಗಳಲ್ಲಿ ರಾಸಾಯನಿಕ ಕ್ರಿಮಿನಾಶಕವನ್ನು ಅಗ್ನಿಶಾಮಕ ಠಾಣೆ ವಾಹನಗಳಿಂದ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತಿದೆ ಈ ಸಾಂಕ್ರಾಮಿಕ ರೋಗ  ಹರಡದಂತೆ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ಸಾರ್ವಜನಿಕರಿಗೆ ತಿಳಿಸಿದರು. ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾತನಾಡಿ ಜಗಳೂರು ಪಟ್ಟಣದಲ್ಲಿ 18 ವಾರ್ಡ್ ಗಳನ್ನು ಒಳಗೊಂಡಂತೆ ಸೋಡಿಯಂ ಕ್ಲೋರೈಡ್ ಔಷಧಿ ಸಿಂಪಡಣೆಯನ್ನು ಕೋವಿಡ್-19 ಸೋಂಕು ನಿಯಂತ್ರಿಸಲು ಜಗಳೂರು ಅಗ್ನಿಶಾಮಕ ಠಾಣಾಧಿಕಾರಿ ಹನುಮಂತರಾಯ ಮತ್ತು ಅವರ ಸಿಬ್ಬಂದಿಗಳ ಸಹಾಯದಿಂದ ಪಟ್ಟಣದ ತುಂಬೆಲ್ಲ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಔಷಧಿಯನ್ನು ಸಿಂಪಡಣೆಗೆ ಕ್ರಮ ಕೈಗೊಳ್ಳಲಾಗಿದೆ ಸಾರ್ವಜನಿಕರು ಅನಗತ್ಯವಾಗಿ ಯಾರು ಹೊರಗಡೆ ತಿರುಗಾಡಿ ಬಾರದು ಅಗತ್ಯ ವಸ್ತುಗಳ ಖರೀದಿಗೆ ಹೊರಗಡೆ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು  ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸರ್ಕಾರದ ನಿಯಮ ಪಾಲನೆ ಮಾಡುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ ಪಟ್ಟಣಪಂಚಾಯತಿಯ ಅಧಿಕಾರಿ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಹನುಮಂತರಾಯ ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್ ಆರೋಗ್ಯ ನಿರೀಕ್ಷಕ ಕೀಪಾಯತ್ಅಮ್ಮದ್ ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯ ಗಿರೀಶ್ ಮುಖಂಡರಾದ ಗೌರಿಪುರ ಶಿವಣ್ಣ ವಕೀಲರಾದ ಆರ್ ಓಬಳೇಶ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಇದ್ದರು.